“ರಿಚರ್ಡ್ ಆಂಟನಿ” – ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಿದ ರಕ್ಷಿತ್ ಶೆಟ್ಟಿ

0
129
Tap to know MORE!

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದು, ಇಂದು (ಜುಲೈ 11) ಸಿನಿಮಾ ಟೈಟಲ್ ಲಾಂಚ್ ಆಗಿದೆ.

ರಕ್ಷಿತ್ ಶೆಟ್ಟಿ ಅವರು ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಹೆಸರು ‘ರಿಚರ್ಡ್ ಆಂಟನಿ’. ಲಾರ್ಡ್ ಆಫ್ ಸೀ ಎನ್ನುವ ಟ್ಯಾಗ್ ಲೈನ್ ಹೊಂದಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ನಡಿ ನಿರ್ಮಾಪಕ ವಿಜಯ್ ಕಿರಂಗದೂರು ನಿರ್ಮಿಸುತ್ತಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

“ಮೊದಲು ನಮ್ಮ ಕೆಲಸ ಮಾತಾಡಲಿ….”

“ಜಯ ಯಾರಿಗೆ ಎಂದು ನೋಡೇ ಬಿಡೋಣ” – ಪಬ್ಲಿಕ್ ಟಿವಿ‌ಗೆ ಬಹಿರಂಗ ಸವಾಲು ಹಾಕಿದ ರಕ್ಷಿತ್ ಶೆಟ್ಟಿ

ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್, ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ. ರಿಚರ್ಡ್ ಆಂಟನಿ-ಮುಂದಿನ ಅಲೆ, ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ, ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ ಎಂದಿದ್ದಾರೆ.

ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಜನ್ಮದಿನದಂದು ನಿರ್ಮಾಪಕ ವಿಜಯ್ ಕಿರಗಂದೂರು ಹಂಚಿಕೊಂಡ ಚಿತ್ರ ಎಲ್ಲರ ಗಮನಸೆಳೆದಿತ್ತು. ಹೊಸ ಚಿತ್ರಕ್ಕೆ ಇವರೀರ್ವರು ಕೈಜೋಡಿಸಲಿದ್ದಾರೆಯೇ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದು ಇದೀಗ ನಿಜವಾಗಿದೆ.

‘ಹೊಂಬಾಳೆ ಫಿಲಂಸ್‌ಗೆ ಒಂದು ಹರುಷದ ದಿನ. ನಮ್ಮ 10ನೇ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುತ್ತಿದ್ದೇವೆ. ಚಿತ್ರಕ್ಕೆ ರಿಚರ್ಡ್ ಆ್ಯಂಟನಿ ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿಜಯ್ ಕಿರಗಂದೂರ್‌ ಅವರು ಹೊಂಬಾಳೆ ಫಿಲಂಸ್‌ ಬ್ಯಾನರಿನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಹಾಗೂ ಕರಮ್‌ ಚಾವ್ಲಾ ಅವರು ಛಾಯಾಗ್ರಹಣವಿರುತ್ತದೆ,’ ಎಂದು ಯೂಟ್ಯೂಬಲ್ಲಿ ಶಿರ್ಷಿಕೆ ಅನಾವರಣಗೊಳಿಸಿದ ಹೊಂಬಾಳೆ ತಂಡ ತಂಡ ತಿಳಿಸಿದೆ.

LEAVE A REPLY

Please enter your comment!
Please enter your name here