ರಿಯಾ ಚಕ್ರವರ್ತಿಯನ್ನು ಬಂಧಿಸಿದ ಎನ್‌ಸಿಬಿ!

0
204
Tap to know MORE!

ಸುಮಾರು 19 ಗಂಟೆಗಳ ವಿಚಾರಣೆ ಬಳಿಕ, ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಮಂಗಳವಾರ ಬಂಧಿಸಿದೆ.

ಎನ್‌ಸಿಬಿಯ ಮೂರನೇ ದಿನದ ವಿಚಾರಣೆಯ ವೇಳೆ, ರಿಯಾ ಚಕ್ರವರ್ತಿ ತಾನು ಗಾಂಜಾ ಮಾತ್ರವಲ್ಲ, ಡ್ರಗ್ಸ್ ಸಹ ಸೇವಿಸುತ್ತಿದ್ದೇನೆ ಎಂದು ಒಪ್ಪಿರುವುದಾಗಿ ಕೆಲವು ಮೂಲಗಳು ಹೇಳಿದೆ. ಎನ್‌ಸಿಬಿಯಿಂದ ಬಂಧಿಸಲ್ಪಟ್ಟಿರುವ ತನ್ನ ಸಹೋದರ ಶೋಯಿಕ್ ಚಕ್ರವರ್ತಿ ಜೊತೆಗೆ ‘ಡ್ರಗ್ಸ್ ಸಂಗ್ರಹಿಸುತ್ತಿರುವುದಾಗಿ’ ನಟಿ ಈ ಹಿಂದೆ ಒಪ್ಪಿಕೊಂಡಿದ್ದಳು.

ಡ್ರಗ್ ಪೆಡ್ಲರ್ ಬಾಸಿತ್ ಅನ್ನು ಭೇಟಿಯಾಗಿದ್ದನ್ನು ಒಪ್ಪಿಕೊಂಡ ರಿಯಾ?

ರಿಯಾ ಚಕ್ರವರ್ತಿ ಅವರು ದೀಪೇಶ್ ಸಾವಂತ್ ಮೂಲಕ ಸುಶಾಂತ್ ಅವರ ಮನೆಗೆ ಡ್ರಗ್ಸ್ ಕಳುಹಿಸಿ ಕೊಡುತ್ತಿದ್ದಳು. ಅದು ಅವಳಿಗಾಗಿ ಅಲಲ, ಬದಲಿಗೆ ಸುಶಾಂತ್ ಮತ್ತು ಅವರ ಸ್ನೇಹಿತರಿಗೆ ಎಂದು ಅವಳು ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ : ನಮಗೆ ಬೆದರಿಕೆ ಕರೆಗಳು ಬರುತ್ತಿದೆ : ರಿಯಾ

ತನ್ನ ಸಹೋದರ ಶೋಯಿಕ್ ಮೂಲಕ, ಪ್ರಸ್ತುತ ಎನ್‌ಸಿಬಿಯ ವಶದಲ್ಲಿರುವ ಡ್ರಗ್ ಪೆಡ್ಲರ್ ಬಸಿತ್ ಪರಿಹಾರ್ ಎಂಬಾತನನ್ನು ಐದು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ ಮತ್ತು ಅವನು ಅವರ ಮನೆಗೆ ಭೇಟಿ ನೀಡುತ್ತಿದ್ದನೆಂದು ರಿಯಾ ಬಹಿರಂಗಪಡಿಸಿದಳು.

ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ 25 ಪ್ರಸಿದ್ಧ ಸೆಲೆಬ್ರಿಟಿಗಳ ಹೆಸರು ಬಹಿರಂಗ?

ರಿಯಾ ಮತ್ತು ಶೋಯಿಕ್ ಚಕ್ರವರ್ತಿಯನ್ನು ಪ್ರಸ್ತುತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ನಡೆಸುತ್ತಿದೆ. ಈ ಸಂದರ್ಭ, ಅವರು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ, ರಿಯಾ ಹಲವಾರು ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ಹೆಸರನ್ನು ನೀಡಿದ್ದಾರೆ. ಇತ್ತೀಚಿನ ಬಾಲಿವುಡ್ ಪಾರ್ಟಿಗಳು ಮತ್ತು ಡ್ರಗ್ಸ್ ಕಳ್ಳಸಾಗಣೆ ಹೇಗೆ ಎಂದು ನಟಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ, ಮುಂದಿನ 10-15 ದಿನಗಳಲ್ಲಿ ಎನ್‌ಸಿಬಿ ಸರಿಯಾದ ಪರಿಶೀಲನೆಯ ಬಳಿಕ ಖ್ಯಾತನಾಮರ ಹೆಸರುಗಳಿಗೆ ಸಮನ್ಸ್ ನೀಡಲು ಪ್ರಾರಂಭಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here