ನನ್ನ ಮತ್ತು ನನ್ನ ಕುಟುಂಬದ ಜೀವಕ್ಕೆ ಅಪಾಯವಿದೆ : ರಿಯಾ ಚಕ್ರಬೋರ್ತಿ

0
176
Tap to know MORE!

ಬಾಲಿವುಡ್ ನಟಿ ರಿಯಾ ಚಕ್ರಬೋರ್ತಿ ತಮ್ಮ ನಿವಾಸದ ಮುಂದೆ, ತನ್ನ ತಂದೆಯನ್ನು ಮಾಧ್ಯಮ ವ್ಯಕ್ತಿಗಳು ಸುತ್ತುವರೆದಿರುವ ವೀಡಿಯೊವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ರಿಯಾ ಮತ್ತು ಅವರ ಕುಟುಂಬವು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಅಡಿ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮನೆಯ ಹೊರಗೆ, ಜನರ ಗದ್ದಲವು ಇಡೀ ಕುಟುಂಬವನ್ನು ಮನೆಯೊಳಗೆಯೇ ಇರುವಂತೆ ಮಾಡಿದೆ ಎಂದು ಹೇಳಿದ್ದಾರೆ .

“ನನ್ನ ಮತ್ತು ನನ್ನ ಕುಟುಂಬದ ಜೀವಕ್ಕೆ ಅಪಾಯವಿದೆ. ಸ್ಥಳೀಯ ಪೊಲೀಸ್ ಠಾಣೆ ಮತ್ತು ತನಿಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ ಅವರ ಕಡೆಯಿಂದ ಯಾವುದೇ ಸಹಾಯ ಬಂದಿಲ್ಲ” ಎಂದು ರಿಯಾ ಚಕ್ರಬೋರ್ತಿ ಬರೆದಿದ್ದಾರೆ.

“ತನಿಖಾ ಸಂಸ್ಥೆಗಳಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ. ವಿವಿಧ ಏಜೆನ್ಸಿಗಳೊಂದಿಗೆ ಸಹಕರಿಸುವುದಕ್ಕಾಗಿ ಮಾತ್ರ ನಾವು ರಕ್ಷಣೆ ಕೇಳುತ್ತಿದ್ದೇವೆ” ಎಂದು ಅವರು ಹೇಳಿದರು. ವೀಡಿಯೊಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here