ಬಂದ್ ಮಾಡಿ ಅಂತ ಯಾರಾದ್ರೂ ಬಂದ್ರೆ, ಅವರ ಮೇಲೆ ಕಲ್ಲು ತೂರಾಟ ಮಾಡಿ : ರಿಷಿ ಕುಮಾರ್ ಸ್ವಾಮೀಜಿ

0
385
Tap to know MORE!

ಮಂಗಳೂರು: ಇವರು ಬಂದ್ ಬಂದ್ ಬಂದ್ ಅಂತಾ ಬಡ್ಕೊಂಡ್ರೆ ಅವರ ಪಾಡಿಗೆ ಅವರು ಬಡ್ಕೊಳ್ಳಲಿ, ನಿಮ್ಮ ಅಂಗಡಿ, ವ್ಯಾಪಾರದ ಕಡೆಗೆ ಇವರೇನಾದ್ರು ಬಂದ್‌ ಮಾಡಿ ಅಂತಾ ಬಂದ್ರೆ ಕಲ್ಲು ಹೊಡೆದು ಕಳಿಸಿ, ತಲೆ ಕೆಡಿಸ್ಕೋಬೇಡಿ ಎಂದು ಅರಸೀಕೆರೆ ಕಾಳಿಕಾಮಠದ ರಿಷಿ ಕುಮಾರ್ ಸ್ವಾಮೀಜಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಕನ್ನಡಪರ ಸಂಘಟನೆಗಳು ಡಿ.5ರಂದು ಕರೆ ನೀಡಿರುವ ಕರ್ನಾಟಕ ಬಂದ್‌ ದಿನ ಬಲವಂತದ ಬಂದ್‌ ಮಾಡಲು ಬಂದರೆ ಹಿಂಸಾತ್ಮಾಕವಾಗಿ ಖಂಡಿಸುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: #BoycottTanishq ಟ್ರೆಂಡಿಂಗ್ – ವಿವಾದಿತ ಜಾಹಿರಾತನ್ನು ಕೆಳಗಿಳಿಸಿದ ತನಿಷ್ಕ್!

ರಾಮಸೇನಾ ವತಿಯಿಂದ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಹೋರಾಟದ ಹೆಸರಿನಲ್ಲಿ ಬಂದ್‌ ಮಾಡ್ತೇನೆ ಹೇಳುತ್ತಾರೆ. ಬಹಳಷ್ಟು ಮಂದಿ ಸಂಘಟನೆ ಹೆಸರು ಹೇಳಿ ರೌಡಿಸಂ ಮೂಲಕ ಬೆದರಿಸಿ ನಾಡಿಗೆ ಅವಮಾನ ಮಾಡುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.

‘ಮರಾಠಿಗರಿಗೆ ಕೊಟ್ರೆ ನಿಮ್ಗೇನು?ಮರಾಠಿಗರು ಟಾಕ್ಸ್ ಕಟ್ಟಲ್ವೇ ಎಂದು ಪ್ರಶ್ನಿಸಿದ ರಿಷಿಕುಮಾರ ಸ್ವಾಮಿ, ಅವನನ್ನು ಅಭಿವೃದ್ಧಿ ಮಾಡ್ಬೇಡ ಅನ್ನೋಕೆ ನೀನ್‌ ಯಾವನಲೇ? ನೀವು ಇಪ್ಪತ್ತು ಜನ ಸೇರಿಕೊಂಡ್ರೆ ಮಾತ್ರ ಕರ್ನಾಟಕನಾ? ಆರೂವರೆ ಕೋಟಿ ಜನ ಕರ್ನಾಟಕದವರಲ್ವಾ’ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಹಿಂದೂ ಪರ ಸಂಘಟನೆಯ ಯುವಕರು ವರ್ಷಕ್ಕೆ ಇಪ್ಪತ್ತು ಜನರಾದ್ರು ಸಾಯ್ತಾರೆ, ನಿಮ್ಮಲ್ಲಿ ಯಾರಾದ್ರೂ ಒಬ್ಬನಾದ್ರು ಸತ್ತಿದ್ದೀರಾ?ಬರೀ ಬರ್ತೀರಾ ಕೂತ್ಕೋತೀರಾ.. ಕೂಗಾಡ್ತೀರಾ.. ಒಬ್ಬ ಕತ್ತೆ ಹಿಡ್ಕೊಂಡು ಬರ್ತಾನೆ ಅವನ್ಯಾರೋ, ಒಂದು ನರಿ ಹಿಡ್ಕೊಂಡು ಬರ್ತಾನೆ, ನಾಯಿ ಹಿಡ್ಕೊಂಡು ಬರ್ತಾನೆ, ಬಂದ್ಬಿಟ್ಟು ಒದ್ದಾಡ್ತಾನೆ.. ಉರುಳಾಡ್ತಾನೆ.. ಆಮೇಲೆ ಮನೆಗೆ ಹೋಗ್ತಾನೆ ಎಂದು ವಾಟಾಳ್‌ ನಾಗರಾಜ್‌ ವಿರುದ್ಧ ಹೆಸರನ್ನು ಉಲ್ಲೇಖಿಸದೆ ಕಿಡಿಕಾರಿದರು.

ಇನ್ನು ಕರ್ನಾಟಕ ನಿಮ್ಮಪ್ಪನ ಮನೆ ಆಸ್ತಿ ಅಂದ್ಕೊಂಡಿದ್ದೀರಾ ಎಂದು ಕಿಡಿಕಾರಿದ ರಿಷಿಕುಮಾರ ಸ್ವಾಮಿ, ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ, ಮಾನ್ಯ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಇಂತವರನ್ನು ಯಾಕೆ ನಮ್ಮ ಪ್ರಾಣ ತೆಗೆಯೋಕೆ ಇಟ್ಕೊಂಡಿದ್ದೀರಾ? ಶೂಟ್‌ ಮಾಡಿ ಬಿಸಾಕಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದಾರೆ. ಅಲ್ಲದೇ ಯೋಗಿ ಆದಿತ್ಯನಾಥ್‌ ಉತ್ತರಪ್ರದೇಶದಲ್ಲಿ ಇಂತಹವರನ್ನು ಯಾರನ್ನೂ ಇಟ್ಕೊಳ್ಳೋದಿಲ್ಲ. ಕರ್ನಾಟಕದಲ್ಲೂ ಬಿಎಸ್‌ವೈ ಈ ರೀತಿ ಮಾಡಬೇಕು ಅನ್ನೋ ರೀತಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here