ಹೊಸದಿಲ್ಲಿ: ರುಚಿ ಹಾಗೂ ವಾಸನೆ ಗ್ರಹಿಕೆಯ ನಷ್ಟವೂ ಕೊರೊನಾ ಲಕ್ಷಣ ಆಗಿರಬಹುದು ಎಂಬ ಅಂಶವನ್ನು ಕೇಂದ್ರ ಆರೋಗ್ಯ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಸೇರಿಸಿದೆ.
ಸರಕಾರದ ಅಂಕಿ ಅಂಶಗಳ ಪ್ರಕಾರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಮೊದಲು ವಾಸನೆ ಮತ್ತು ರುಚಿ ಗ್ರಹಿಕೆ ನಷ್ಟವಾಗಿರುವುದು ಕಂಡುಬಂದಿದೆ. ಹಾಗಾಗಿ ಇದು ಸೋಂಕಿನ ಲಕ್ಷಣಗಳು ಆಗಿರಬಹುದೆಂದು ಹೇಳಲಾಗಿದೆ. ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅತಿಸಾರ, ಆಯಾಸ, ರುಚಿ ನಷ್ಟದಂತಹ ಲಕ್ಷಣಗಳಿರುತ್ತವೆ. ಮಕ್ಕಳಲ್ಲಿ ಕೆಮ್ಮು ಜ್ವರದ ಲಕ್ಷಣಗಳಿಲ್ಲದ ಪ್ರಕರಣಗಳು ಕಂಡುಬಂದಿವೆ ಎನ್ನಲಾಗಿದೆ.