ಕೊರೋನಾ : ರೂಪಾಂತರಗೊಂಡ ಸೋಂಕಿನ ತಡೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ!

0
210
Tap to know MORE!

ನವದೆಹಲಿ ಡಿ 22: ಯುಕೆಯಲ್ಲಿ ಮ್ಯೂಟಂಟ್ ಕೊರೊನಾ ವೈರಸ್ ಹೆಸರಿನ ರೂಪಾಂತರಗೊಂಡ ಸೋಂಕು ಹರಡುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP)​ನ್ನು ಬಿಡುಗಡೆ ಮಾಡಿದೆ.

ಎಸ್​ಓಪಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ಮ್ಯೂಟಂಟ್ ವೈರಸ್ ಹರಡದಂತೆ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಹೇಳಿದೆ.

ಇದನ್ನೂ ಓದಿ: ಬ್ರಿಟನ್‌ನಿಂದ ಬಂದವರ ಮೇಲೆ ಹೆಚ್ಚಿನ ನಿಗಾ| ಹೋಂ ಕ್ವಾರಂಟೈನ್ ಕಡ್ಡಾಯ: ಸಚಿವ ಡಾ|ಸುಧಾಕರ್

 • ರಾಜ್ಯ ಸರ್ಕಾರವು ಇಂಗ್ಲೆಂಡ್‌ನಿಂದ ಬಂದಿಳಿದಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್​ಟಿಪಿಸಿಆರ್ ಟೆಸ್ಟ್​ಗೆ ಒಳಪಡಿಸುವುದು. ಸ್ಯಾಂಪಲ್ ಪಾಸಿಟಿವ್ ಬಂದಲ್ಲಿ ಜೀನ್ ಆಧಾರಿತ ಆರ್​​ಟಿಪಿಸಿಆರ್​ ಟೆಸ್ಟ್​ಗೆ ಒಳಪಡಿಸುವುದು.
 • ಪಾಸಿಟಿವ್ ವರದಿ ಬಂದ ಪ್ರಯಾಣಿಕರನ್ನು ರಾಜ್ಯ ಸರ್ಕಾರ ಆರೋಗ್ಯ ಇಲಾಖೆ ಸ್ಥಾಪಿಸಿದ ಕೇಂದ್ರದಲ್ಲಿ ಇನ್ಸ್​​ಟಿಟ್ಯೂಷನಲ್​ ಐಸೋಲೇಷನ್​ಗೆ ಒಳಪಡಿಸುವುದು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದು. ಸ್ಯಾಂಪಲ್​ಗಳನ್ನು ಪುಣೆಯ ನ್ಯಾಷನಲ್ ಇನ್​​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಅಥವಾ ಸೂಕ್ತ ಲ್ಯಾಬ್​ಗೆ ಪರೀಕ್ಷೆಗೆ ಕಳಿಸುವುದು.

ಇದನ್ನೂ ಓದಿ: ಭಾರತಕ್ಕೂ ಲಗ್ಗೆಯಿಟ್ಟ ಹೊಸ ಮಾದರಿಯ ಕೊರೋನಾ!

 • ಸೋಂಕಿತರು ಸದ್ಯ ಇರುವ ವೈರಸ್​​ನ ಸೋಂಕಿಗೆ ಒಳಗಾಗಿದ್ದರೆ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೋಮ್ ಐಸೋಲೇಷನ್ ಅಥವಾ ನಿಗದಿತ ಸ್ಥಳದಲ್ಲಿ ಅವರಿಗೆ ಚಿಕಿತ್ಸೆ ನೀಡುವುದು.
 • ಸೋಂಕಿತರು ಹೊಸ ರೂಪಾಂತರಗೊಂಡ ಸೋಂಕಿಗೆ ಒಳಗಾಗಿದ್ದರೆ ಅವರನ್ನು ಐಸೋಲೇಷನ್​ ಯೂನಿಟ್​ನಲ್ಲೇ ಉಳಿಸಿಕೊಳ್ಳುವುದು. ಪ್ರೋಟೋಕಾಲ್​ನಂತೆ ಚಿಕಿತ್ಸೆ ನೀಡಿ 14 ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸುವುದು. ಮತ್ತೆ ಪಾಸಿಟಿವ್ ಬಂದಲ್ಲಿ 24 ಗಂಟೆಗಳ ನಂತರ ಮತ್ತೊಮ್ಮೆ ಪರೀಕ್ಷೆಗೊಳಪಡಿಸುವುದು.
 • ಆರ್​ಟಿಪಿಸಿಆರ್ ಟೆಸ್ಟ್​ನಲ್ಲಿ ನೆಗೆಟಿವ್ ವರದಿ ಬಂದವರನ್ನು ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚನೆ ನೀಡುವುದು.
 • ವಿಮಾನಯಾನ ಸಿಬ್ಬಂದಿ ಪ್ರಯಾಣಿಕರಿಗೆ ಎಸ್​ಓಪಿ ಕುರಿತು ಅರಿವು ಮೂಡಿಸುವುದು. ಹಾಗೂ ಅನೌನ್ಸ್ ಮಾಡುವ ಮೂಲಕ ಎಚ್ಚರಿಕೆ ವಹಿಸುವಂತೆ ಮಾಹಿತಿ ನೀಡುವುದು.
 • ಹೊರ ದೇಶದಿಂದ ಬಂದವರಿಗೆ ಇನ್ಸ್‌ಟಿಟ್ಯೂಷನಲ್ ಕ್ವಾರಂಟೈನ್‌ ಕಡ್ಡಾಯಪಡಿಸುವುದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

 • ಹೊರ ದೇಶಗಳಿಗೆ ಡಿ.21, 22, 23 ರಂದು ವಿಮಾನಗಳು ರದ್ದು
 • ಯಾವುದೇ ಮಾಹಿತಿ ಬೇಕಾದ್ರೂ ತಕ್ಷಣವೇ ರಾಷ್ಟ್ರೀಯ ಹೆಲ್ಪ್‌ಲೈನ್ 1075 ಗೆ ಕರೆ ಮಾಡುವುದು.
 • ರೋಗದ ಗುಣಲಕ್ಷಣಗಳು ಇದ್ದರೆ, ಅವರು ಮಾಸ್ಕ್ ಧರಿಸುವುದು ಕಡ್ಡಾಯ.
 • ಕಳೆದ 4 ವಾರಗಳಲ್ಲಿ ಅಂದರೆ ನವೆಂಬರ್ 25 ರಿಂದ ಈವರೆಗೆ ಪ್ರಯಾಣಿಸಿರುವ ಹಾಗೂ ಡಿಸೆಂಬರ್ 23 ರವರೆಗೆ ಪ್ರಯಾಣ ನಡೆಸುವ ಪ್ರಯಾಣಿಕರಿಗೆ ಈ ಟೆಸ್ಟ್​​ಗಳನ್ನು ಮಾಡಬೇಕು.

ಕೋವಿಡ್-19: ಭಾರತದಲ್ಲಿ 1 ಕೋಟಿ ದಾಟಿದ ಒಟ್ಟು ಸೋಂಕಿತರ ಸಂಖ್ಯೆ| 95 ಲಕ್ಷಕ್ಕೂ ಅಧಿಕ ಗುಣಮುಖ

LEAVE A REPLY

Please enter your comment!
Please enter your name here