ರೆಡ್ ಕ್ರಾಸ್ ‌‌ನಿಂದ ಸ್ವಯಂಸೇವೆಯ ಪಾಠ:  ಸಚೇತ್‌ ಸುವರ್ಣ

0
115
Tap to know MORE!

ಮಂಗಳೂರು ಜ.7:  ನಮ್ಮೊಳಗಿನ ಮಾನವೀಯತೆಯ ಕರೆಗೆ ಓಗೊಟ್ಟು ಪ್ರೋತ್ಸಾಹ, ಒತ್ತಡಗಳಿಲ್ಲದೆ ಸಹಾಯ ಮಾಡುವ ಅದ್ಭುತ ಪ್ರವೃತ್ತಿಯೇ ಸ್ವಯಂಸೇವೆ. ಇದರ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ಯುವ ರೆಡ್‌ಕ್ರಾಸ್‌ ಸಂಯೋಜಕ ಸಚೇತ್‌ ಸುವರ್ಣ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶವ್ವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್‌ ಘಟಕಗಳು ಜಂಟಿಯಾಗಿ ಬುಧವಾರ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರೆಡ್‌ಕ್ರಾಸ್‌ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಷನ್‌ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು. “ಹೆನ್ರಿ ಡ್ಯುನಂಟ್‌ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಘಟನೆ ರೆಡ್‌ ಕ್ರಾಸ್‌ಗೆ 100 ವರ್ಷ ಸಂದ ಈ ಸಂದರ್ಭದಲ್ಲಿ ನಾವು ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿ ಆಂತರ್ಯದ ಸಂತಸ ಕಾಣುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ರೆಡ್‌ ಕ್ರಾಸ್‌ ಮೂಲಕ ವೈಯಕ್ತಿಕ ಕೌಶಲಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಸಮಾಜಕ್ಕೆ ಸ್ಪಂದಿಸಿ”, ಎಂದವರು ಕರೆ ನೀಡಿದರು.

ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಎಂ.ಕಾಂ ಪಠ್ಯಪುಸ್ತಕ ಲೋಕಾರ್ಪಣೆ

ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ ಮಾತನಾಡಿ ರೆಡ್‌ ಕ್ರಾಸ್‌ ವ್ಯಕ್ತಿಯನ್ನು ಸಮಾಜಮುಖಿಯನ್ನಾಗಿಸುವ ಜೊತೆಗೆ ತಾರತಮ್ಯರಹಿತತೆ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂ ಸೇವೆ ಮತ್ತು ಸಾರ್ವತ್ರಿಕತೆಯ ಅಮೂಲ್ಯ ಪಾಠ ಬೋಧಿಸುತ್ತದೆ, ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಎ ಹರೀಶ, ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ಯೋಜನೆಗಳಿಗೆ ಶುಭ ಕೋರಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕಾಲೇಜಿನ ಯುವ ರೆಡ್‌ಕ್ರಾಸ್‌ನ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ ಸ್ವಾಗತ ಕೋರಿದರು. ಪ್ರಣಾಮ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ನಿಶಾಂರ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಹಿಂದಿ ದೇಶ ಜೋಡಿಸುವ ಭಾಷೆ | ಹಿಂದಿಯಿಂದ ಉದ್ಯೋಗಾವಕಾಶವೂ ಹೆಚ್ಚು: ಡಾ. ಸುಕನ್ಯಾ ಮೇರಿ

LEAVE A REPLY

Please enter your comment!
Please enter your name here