ರೈತರ ಪ್ರತಿಭಟನೆ | ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ!

0
133
Tap to know MORE!

ನವದೆಹಲಿ ಡಿ.18: ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ರೂಪ ಪಡೆದುಕೊಳ್ಳುತ್ತಲೇ ಇದೀಗ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ರೈತರನ್ನು ಉದ್ದೇಶಿಸಿ ವಿಡಿಯೋ ಲಿಂಕ್​ ಮೂಲಕ ಮಾತನಾಡಿದ್ದಾರೆ.

ಈ ಹಿಂದೆಯೂ ಹೇಳಿರುವ ಮಾತುಗಳನ್ನು ಪುನರುಚ್ಚರಿಸಿರುವ ಪ್ರಧಾನಿಯವರು, ದಯವಿಟ್ಟು ಒಮ್ಮೆ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ತೆಗೆದುನೋಡಿ. ಎಲ್ಲರೂ ಇದೇ ಕಾನೂನಿನ ಜಾರಿಯ ಕುರಿತು ಮಾತನಾಡಿದ್ದಾರೆ. ಆದರೆ ಈಗ ಅದೇ ಕಾನೂನನ್ನು ನಮ್ಮ ಸರ್ಕಾರ ಜಾರಿ ಮಾಡಿದರೆ ರೈತರ ದಾರಿ ತಪ್ಪಿಸುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ

23 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿನ ಜನರು ಈ ಭಾಷಣ ಕೇಳಿರುವುದಾಗಿ ಹೇಳಲಾಗಿದೆ. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಈ ಕಾನೂನುಗಳು ಸುಧಾರಣೆ ಮಾಡುತ್ತಿವೆ ಎಂಬ ಬಗ್ಗೆ ಎಂಟು ಪುಟಗಳ ಪತ್ರವನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ.

ಪಕ್ಷದ ನಾಯಕರಾದ ಕೇಂದ್ರ ಸಚಿವ ಅಮಿತ್ ಷಾ, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ತೋಮರ್ ಮತ್ತು ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಭಾಗವಹಿಸಿದ್ದ ಪಕ್ಷದ ಸಭೆಯ ನಂತರ ಬಿಡುಗಡೆಯಾದ ಪತ್ರ ಇದಾಗಿದೆ. ಇದರಲ್ಲಿ ಕಾನೂನುಗಳು ಏನು ಹೇಳಹೊರಟಿವೆ, ಇದು ಹೇಗೆ ರೈತ ಸ್ನೇಹಿಯಾಗಿದೆ ಎನ್ನುವುದನ್ನು ವಿವರವಾಗಿ ಬರೆಯಲಾಗಿದೆ. ಈ ಕುರಿತು ಪ್ರಧಾನಿ ಮೋದಿಯವರು ರೈತಾಪಿ ವರ್ಗಕ್ಕೆ ಮನವರಿಕೆ ಮಾಡಿಕೊಟ್ಟರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೃಷಿ ಕ್ಷೇತ್ರದಲ್ಲಿ ಶೇಖರಣಾ ಸೌಲಭ್ಯಗಳು ಮತ್ತು ಉಗ್ರಾಣಗಳು ಬಹಳ ಮುಖ್ಯ. ರೈತ ಎಷ್ಟೇ ಪ್ರಯತ್ನ ಮಾಡಿದರೂ ಶೇಖರಣೆ ಸರಿಯಿಲ್ಲದಿದ್ದರೆ ಅದು ದೊಡ್ಡ ನಷ್ಟ. ಈ ನಷ್ಟವು ಕೇವಲ ರೈತರ ನಷ್ಟವಲ್ಲ, ಬದಲಿಗೆ ಇದು ರಾಷ್ಟ್ರಕ್ಕೆ ಆಗುವ ನಷ್ಟ. ಇದೇ ಕಾರಣಕ್ಕೆ ನೂತನ ಕಾನೂನು ಜಾರಿಗೊಳಿಸಿ ರೈತರಿಗೆ ಮಾತ್ರವಲ್ಲದೇ, ಇಡೀ ರಾಷ್ಟ್ರಕ್ಕೆ ಪ್ರಯೋಜನಕಾರಿಯಾಗಿದೆ ಎಂದರು.

ಆಹಾರ ಸಂಸ್ಕರಣಾ ಕೇಂದ್ರಗಳು, ಗೋದಾಮುಗಳು, ಕೋಲ್ಡ್ ಸ್ಟೋರೇಜ್‌ಗಳು, ಡ್ರೈ ಸ್ಟೋರೇಜ್‌ಗಳು ಸ್ಥಾಪಿಸುವುದು ಮುಖ್ಯ. ನಾವು ಈಗ ಈ ಬಗ್ಗೆ ಕಾರ್ಯನಿರ್ವಹಿಸಬೇಕಾಗಿದೆ. ರೈತಾಪಿ ವರ್ಗದವರು ಹಿಂದೆ ಬೀಳುವಲ್ಲಿ ಅರ್ಥವಿಲ್ಲ. ರೈತರಿಗೆ ಕಷ್ಟ ಕೊಡದೇ ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಾಧಕ ಬಾಧಕಗಳನ್ನು ಕಲೆ ಹಾಕಿ ಈ ಕಾನೂನು ಜಾರಿಗೊಳಿಸಲಾಗಿದೆ. ಇದು ರಾತ್ರೋರಾತ್ರಿ ತಂದ ಕಾನೂನಲ್ಲ, ಕಳೆದ 20-30 ವರ್ಷಗಳಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಸುಧಾರಣೆಗಳ ಬಗ್ಗೆ ವಿವರವಾದ ಚರ್ಚೆಗಳನ್ನು ನಡೆಸಿವೆ. ಕೃಷಿ ತಜ್ಞರು, ಅರ್ಥಶಾಸ್ತ್ರಜ್ಞರು ಮತ್ತು ಪ್ರಗತಿಪರ ರೈತರ ಜತೆ ಚರ್ಚಿಸಿವೆ. ಇವೆಲ್ಲವುಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕಾನೂನು ಜಾರಿಗೊಳಿಸಲಾಗಿದೆ ಎಂದು ಪುನರುಚ್ಚರಿಸಿದರು.

ಇದೇ ವೇಳೆ ಮೂರು ಕೃಷಿ ಕಾನೂನುಗಳ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಪ್ರಧಾನಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಕಾನೂನಿನ ಬಗ್ಗೆ ಉಲ್ಲೇಖಿಸಿ ಇದೀಗ ರೈತರನ್ನು ದಾರಿ ತಪ್ಪಿಸಬಾರದು ಎಂದು ರಾಜಕೀಯ ಪಕ್ಷಗಳಿಗೆ ಹೇಳಿದರು.

ಗುಜರಾತ್: ಸಾವಿಗೂ ಮುನ್ನ, ಏಳು ಮಕ್ಕಳ ಪ್ರಾಣ ಉಳಿಸಿದ ಎರಡುವರೆ ವರ್ಷದ ಮಗು!!

LEAVE A REPLY

Please enter your comment!
Please enter your name here