ಸೆ.12 ರಿಂದ 80 ರೈಲುಗಳ ಸಂಚಾರ ಆರಂಭ – ಸೆ. 10 ರಿಂದ ಬುಕಿಂಗ್

0
188
Tap to know MORE!

ನವದೆಹಲಿ: ಸೆಪ್ಟೆಂಬರ್ 12 ರಿಂದ 80 ವಿಶೇಷ ರೈಲುಗಳ ಸಂಚಾರ ಪ್ರಾರಂಭವಾಗಲಿದೆ. ಈ ಹೊಸ ರೈಲುಗಳಿಗೆ ಮೀಸಲಾತಿಯು ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಲಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ. ಈ ರೈಲುಗಳು, ಈಗಾಗಲೇ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಜೊತೆಗೆ ಇರಲಿವೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020 ರ ಮಾರ್ಚ್ 25 ರಿಂದ ದೇಶದಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

“ಸೆಪ್ಟೆಂಬರ್ 12 ರಿಂದ ಎಂಭತ್ತು ಹೊಸ ವಿಶೇಷ ರೈಲುಗಳು ತಮ್ಮ ಸಂಚಾರವನ್ನು ಪ್ರಾರಂಭಿಸಲಿವೆ. ಸೆಪ್ಟೆಂಬರ್ 10 ರಿಂದ ಮೀಸಲಾತಿ ಪ್ರಾರಂಭವಾಗಲಿದೆ. ಇದು ಈಗಾಗಲೇ ಚಾಲನೆಯಲ್ಲಿರುವ 230 ರೈಲುಗಳಿಗೆ ಹೆಚ್ಚುವರಿಯಾಗಿ ಚಲಿಸುತ್ತದೆ” ಎಂದು ಅವರು ಹೇಳಿದರು.

ಸಂಚರಿಸಲಿರುವ 80 ವಿಶೇಷ ರೈಲುಗಳ ಪಟ್ಟಿ :

ರೈಲು, train schedule

 

ಸುದ್ದಿವಾಣಿ, ರೈಲು, ಭಾರತೀಯ ರೈಲ್ವೆ, train schedule

ಪರೀಕ್ಷೆಗಳು ಅಥವಾ ಇತರ ಉದ್ದೇಶಗಳಿಗಾಗಿ ರಾಜ್ಯಗಳಿಂದ ಬೇಡಿಕೆ ಬಂದಾಗಲೆಲ್ಲಾ ರೈಲ್ವೆ ಇಲಾಖೆಯು ರೈಲುಗಳನ್ನು ಓಡಿಸುತ್ತದೆ ಎಂದು ಯಾದವ್ ತಿಳಿಸಿದ್ದಾರೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ನೇವಲ್ ಅಕಾಡೆಮಿ (ಎನ್‌ಎ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ 23 ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ನಿನ್ನೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಸಂಪೂರ್ಣ ಕಾಯ್ದಿರಿಸಿದ ಈ ವಿಶೇಷ ರೈಲುಗಳು ಸೆಪ್ಟೆಂಬರ್ 4, ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 6 ರಂದು ಚಲಿಸುತ್ತವೆ.

LEAVE A REPLY

Please enter your comment!
Please enter your name here