ಹಳೆಯಂಗಡಿ : ಯುವತಿ ಮತ್ತು ಮಹಿಳಾ ಮಂಡಲದಲ್ಲಿ ಲಕ್ಷ್ಮೀ ಪೂಜೆ ಮತ್ತು ಆಯುಧ ಪೂಜೆ

0
111

ಹಳೆಯಂಗಡಿ ನ.15: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲದ ಆಶ್ರಯದಲ್ಲಿ ಭಾನುವಾರ ಮಂಡಲದ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ಮತ್ತು ಆಯುಧ ಪೂಜೆಯು ನೆರವೇರಿತು. ಶ್ರೀ ಜಗನ್ನಾಥ ಭಟ್ ರವರ ಪೌರೋಹಿತ್ಯದಲ್ಲಿ ಪೂಜಾ ವಿಧಿ ವಿಧಾನಗಳು ಜರಗಿತು.

ಮಹಾಪೂಜೆತ ಮೊದಲು ಭಜನಾ ಕಾರ್ಯಕ್ರಮ ನಡೆಯಿತು. ಯುವತಿ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here