ಜನಾಕ್ರೋಶಕ್ಕೆ ಮಣಿದ ಚಿತ್ರತಂಡ – “ಲಕ್ಷ್ಮೀ ಬಾಂಬ್” ಚಿತ್ರದ ಶೀರ್ಷಿಕೆ ಬದಲು!

0
166
Tap to know MORE!

ರಾಘವ ಲಾರೆನ್ಸ್ ನಿರ್ದೇಶನದ ಲಕ್ಷ್ಮೀ ಬಾಂಬ್ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ಟ್ರೈಲರ್ ಆನ್‌ಲೈನ್‌ನಿಂದ ತೆಗೆದಿದ್ದು,  ಕೆಲವು ಹಾಸ್ಯಕರ ಮತ್ತು ಭಯಾನಕ ದೃಶ್ಯಗಳಿಂದ ಜನರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ.

ಇದೀಗ ನಡೆದ ಬದಲಾವಣೆಯಲ್ಲಿ, ಸಿನಿಮಾ ಶೀರ್ಷಿಕೆಯನ್ನು ಬದಲಿಸಲು ಚಿತ್ರತಂಡ ನಿರ್ಧರಿಸಿದೆ. “ಲಕ್ಷ್ಮೀ ಬಾಂಬ್” ಬದಲಿಗೆ ಕೇವಲ “ಲಕ್ಷ್ಮೀ” ಶೀರ್ಷಿಕೆಯಲ್ಲಿ ಚಿತ್ರವು ತೆರೆಗೆ ಬರಲಿದೆ.

ನಟ ಅಕ್ಷಯ್ ಕುಮಾರ್ ಅವರ ತೃತೀಯ ಲಿಂಗಿ ಪಾತ್ರ ಈಗಲೂ ಬಹಳಷ್ಟು ಜನರಿಗೆ ಸ್ವಾರಸ್ಯಕರವಾಗಿಯೇ ಕಂಡುಬಂದಿದೆ. ಸಿನಿಮಾ ನಿರ್ದೇಶಕ ರಾಘವ ಲಾರೆನ್ಸ್ ಸಿನಿಮಾದ ಸೆನ್ಸಾರ್ ಸರ್ಟಿಫೀಕೇಟ್ ಪಡೆಯಲು ತೆರಳಿದ್ದು, ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರತಂಡ ಸಿಬಿಎಫ್‌ಸಿ ಜೊತೆ ಚರ್ಚೆ ನಡೆಸಿದೆ.

ಪ್ರೇಕ್ಷಕರ ಭಾವನೆಗಳನ್ನು ಗೌರವಿಸಿ ಸಿನಿಮಾ ನಿರ್ಮಾಪಕರಾದ ಶಬಿನಾ ಖಾನ್, ತುಷಾರ್ ಕಪೂರ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾದ ಟೈಟಲ್ ಬದಲಾಯಿಸಲು ನಿರ್ಧರಿಸಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ಕಾಮೆಡಿ ಹಾರರ್ ಸಿನಿಮಾಗೆ ಈಗ ಲಕ್ಷ್ಮೀ ಬಾಂಬ್ ಬದಲು ಲಕ್ಷ್ಮಿ ಎಂದು ಹೆಸರಿಡಲಾಗಿದೆ. ಸಿನಿಮಾ ನವೆಂಬರ್ 09ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಅಗಲಿದೆ. ಸಿನಿಮಾವನ್ನು ಕೇಪ್ ಆಫ್ ಗುಡ್ ಹೋಪ್ಸ್ ಫಿಲ್ಮ್ಸ್, ತುಷಾರ್ ಎಂಟರ್ಟೈನ್‌ಮೆಂಟ್ ಹೌಸ್, ಹಾಗೂ ಶಬಿನಾ ಎಂಟರ್ಟೈನ್‌ಮೆಂಟ್ ನಿರ್ಮಿಸಿದೆ.

LEAVE A REPLY

Please enter your comment!
Please enter your name here