ವಿದ್ಯಾರ್ಥಿನಿಯನ್ನು ಹಾಡಹಗಲೇ ಕೊಂದ ದುಷ್ಕರ್ಮಿಗಳು – “ಲವ್ ಜಿಹಾದ್” ಎಂದು ಆರೋಪಿಸಿದ ಕುಟುಂಬಸ್ಥರು!

0
204
Tap to know MORE!

ಫರಿದಾಬಾದ್: 21 ವರ್ಷದ ವಿದ್ಯಾರ್ಥಿನಿಯನ್ನು, ತನ್ನ ಕಾಲೇಜಿನ ಮುಂಭಾಗದಲ್ಲಿ, ಹಗಲು ಹೊತ್ತಿನಲ್ಲಿಯೇ ಗುಂಡಿಕ್ಕಿ ಕೊಂದ ಘಟನೆ ಹರಿಯಾಣ ರಾಜ್ಯದ ಫರೀದಾಬಾದ್‌ನಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ನಡೆದ ಕೊಲೆಯ ವೀಡಿಯೊ ಸಿಸಿ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿದ್ದು, ಅದರಲ್ಲಿ ಗುಂಡು ಹಾರಿಸುವ ಮೊದಲು ಯುವತಿಯು ತನ್ನನ್ನು ತಾನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವುದು ಕಂಡುಬರುತ್ತದೆ.

ಸೋಮವಾರ ಮಧ್ಯಾಹ್ನ 3.40 ರ ಸುಮಾರಿಗೆ ಫರಿದಾಬಾದ್‌ನ ಬಲ್ಲಾಬ್‌ಗಢದ ಕಾಲೇಜೊಂದರ ಹೊರಗೆ ಈ ಘಟನೆ ನಡೆದಿದ್ದು, ನಿಕಿತಾ ತೋಮರ್ ಹೆಸರಿನ ಯುವತಿಯು ಪದವಿ ಪರೀಕ್ಷೆಗೆ ಹೋಗಿದ್ದಳು ಎನ್ನಲಾಗಿದೆ. ಅವಳು ಅಂತಿಮ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯಾಗಿದ್ದಳು.

ಅಪರಾಧಿಗಳಾದ, ತೌಸೀಫ್ ಮತ್ತು ಅವನ ಸ್ನೇಹಿತ ರೆಹಾನ್, ಅವಳು ಕಾಲೇಜಿನಿಂದ ಹೊರಬರಲು, ಕಾರಿನಲ್ಲಿ ಕಾಯುತ್ತಿದ್ದರು. ತೌಸೀಫ್ ಮತ್ತು ನಿಕಿತಾ ಒಬ್ಬರಿಗೊಬ್ಬರು ಈ ಹಿಂದೆಯೇ ತಿಳಿದಿದ್ದರು ಮತ್ತು 2018 ರಲ್ಲಿಯೂ ಅವಳನ್ನು ಈತ ಅಪಹರಿಸಿದ್ದಾನೆ ಎಂದು ಫರಿದಾಬಾದ್ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಹೇಳಿದ್ದಾರೆ.

ವೀಡಿಯೊದಲ್ಲಿ, ಮೊದಲಿಗೆ ನಿಕಿತಾ ಮತ್ತು ಅವಳ ಸ್ನೇಹಿತೆ ಕಾರಿನ ಬಳಿ ಕಾಣಿಸಿಕೊಂಡಿದ್ದಾರೆ. ಬಳಿಕ ಅಲ್ಲಿಂದ ಬಂದೂಕು ಹಿಡಿದಿದ್ದ ಅಪರಾಧಿಗಳಿಂದ ತಪ್ಪಿಸಿಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದ್ದಾರೆ.

ಅಂತಿಮವಾಗಿ, ಅವಳನ್ನು ಸಾಯಿಸುವ ಮೊದಲು, ಗುಂಡು ಹಾರಿಸಿದ ವ್ಯಕ್ತಿ ಅವಳನ್ನು ಬೆನ್ನಟ್ಟುತ್ತಾನೆ. ಅವಳಿಗೆ ಗುಂಡು ತಾಗಿದೆ ಎಂದು ತಿಳಿದ ತತ್‌ಕ್ಷಣದಲ್ಲಿ, ಸ್ನೇಹಿತ ಅವನನ್ನು ಕಾರಿಗೆ ಎಳೆದೊಯ್ದು, ಕಾರಿನಲ್ಲಿ ಪರಾರಿಯಾಗುತ್ತಾರೆ. ಇತ್ತ ನಿಕಿತಾ ರಸ್ತೆಯಲ್ಲಿಯೇ ಬಿದ್ದಿರುತ್ತಾಳೆ. ಅವಳಿಂದ ರಕ್ತ ಸೂಸುತ್ತಿರುತ್ತದೆ. ಅವಳ ಸ್ನೇಹಿತೆ ಗಾಬರಿಯಿಂದ ನೋಡುತ್ತಾಳೆ. ಕೊನೆಗೆ ನಿಕಿತಾ ಆಸ್ಪತ್ರೆಯಲ್ಲಿ ಅಸುನೀಗಿದಳು.

“ಪ್ರೀತಿಸಿ, ಮತಾಂತರವಾಗಲು ಯುವಕರು ಒತ್ತಾಯಿಸುತ್ತಿದ್ದರು”
ಫರೀದಾಬಾದ್‌ ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟಿರುವ 21 ವರ್ಷದ ವಿದ್ಯಾರ್ಥಿನಿಯ ಕುಟುಂಬವು ಇದನ್ನು ” ಲವ್ ಜಿಹಾದ್ ” ಎಂದು ಆರೋಪಿಸಿದ್ದಾರೆ. “ಮತಾಂತರಗೊಳ್ಳಲು ಒತ್ತಾಯಿಸಲಾಗುತ್ತಿದೆ” ಎಂದು ಮಗಳು ಹೇಳುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಆರೋಪಿಗಳಲ್ಲಿ ಒಬ್ಬರಾಗಿರುವ ಸೊಹ್ನಾ ಮೂಲದ ತೌಸಿಫ್, ನಿಕಿತಾಗೆ ತಿಳಿದಿದ್ದರು ಮತ್ತು ಅವರ ವಿರುದ್ಧ ಕೆಲವು ತಿಂಗಳ ಹಿಂದೆ ಕಿರುಕುಳಕ್ಕಾಗಿ ದೂರು ದಾಖಲಿಸಲಾಗಿತ್ತು. ಆದರೆ ಅಲ್ಲಿಯೇ ರಾಜಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಆರೋಪಿ ಕಳೆದ ಮೂರು ವರ್ಷಗಳಿಂದ ಯುವತಿಯನ್ನು, ತನ್ನ ಧರ್ಮಕ್ಕೆ ಮತಾಂತರ ಮಾಡಲು ಒತ್ತಾಯಿಸುತ್ತಿದ್ದಾನೆ ಎಂದು ಕುಟುಂಬದ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಅವಳು ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದಾಗ, ಆರೋಪಿಗಳು ಅವಳನ್ನು ಅಪಹರಿಸಲು ಪ್ರಯತ್ನಿಸಿದರು ಮತ್ತು ಹಗಲು ಹೊತ್ತಿನಲ್ಲಿ ಅವಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

“ಅವನು ಅವಳನ್ನು ತನ್ನ ಕಾರಿನಲ್ಲಿ ಬಲವಂತವಾಗಿ ಕುಳಿತಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಅವಳು ನಿರಾಕರಿಸಿದಳು ಮತ್ತು ನಂತರ ಅವನು ಅವಳ ಮೇಲೆ ಗುಂಡು ಹಾರಿಸಿದನು” ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here