BIG NEWS| ಮಂಗಳೂರು: ಲಷ್ಕರ್ ಉಗ್ರರನ್ನು ಕರೆಸುವ ಬೆದರಿಕೆಯ ಗೋಡೆ ಬರಹ

0
161
Tap to know MORE!

ಮಂಗಳೂರು: ಮಂಗಳೂರಿನಲ್ಲಿ ಲಷ್ಕರ್ ಉಗ್ರರನ್ನು ಕರೆಸುವುದಾಗಿ ಗೋಡೆ ಮೇಲೆ ಬರೆಯಲಾಗಿದೆ. ಅಪಾರ್ಟ್ ಮೆಂಟ್ ವೊಂದರ ಕಾಂಪೌಂಡ್ ಮೇಲೆ ಕಿಡಿಗೇಡಿಗಳು ಇಂತಹ ಕೃತ್ಯವೆಸಗಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಕಾಂಪೌಂಡ್ ಗೋಡೆ ಮೇಲೆ ಈ ರೀತಿ ಬರೆಯಲಾಗಿದ್ದು, ಕದ್ರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿವಾದಿತ ಗೋಡೆ ಬರಹದ ಮೇಲೆ ಪೊಲೀಸರು ತಾಡಪಾಲ್ ಮುಚ್ಚಿ ಮರೆ ಮಾಚಿದಿದ್ದಾರೆ.

ಬರಹದ ಮೂಲಕ ಲಷ್ಕರ್ ಉಗ್ರರನ್ನು ಕರೆಸುವುದಾಗಿ ಹೇಳಲಾಗಿದೆ. ಲಷ್ಕರ್ ಉಗ್ರರನ್ನು ಕರೆಸುವಂತೆ ನಮಗೆ ಒತ್ತಾಯ ಮಾಡಬೇಡಿ ಎಂದೆಲ್ಲಾ ಬರೆಯಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here