ದೇಶದಲ್ಲಿ ಮತ್ತೊಂದು ಲಸಿಕೆ ಬಳಕೆಗೆ ಅನುಮೋದನೆ | ಆಮದು ಮಾಡಲಿದೆ ಸಿಪ್ಲಾ ಕಂಪನಿ

0
208
Tap to know MORE!

ನವದೆಹಲಿ: ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಕೋವಿಡ್–19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ದೊರೆತಿದೆ. ಈ ಕುರಿತು ಪಿಟಿಐ ವರದಿ ಮಾಡಿದೆ.

18 ವರ್ಷ ಮೇಲ್ಪಟ್ಟವರಲ್ಲಿ ಮಾಡರ್ನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಮಾಡರ್ನಾ ಲಸಿಕೆಯ ಆಮದು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶೀಯ ಔಷಧ ಕಂಪನಿ ಸಿಪ್ಲಾ ಸೋಮವಾರ ಮನವಿ ಸಲ್ಲಿಸಿತ್ತು.

ಸೋನಿಯಾ ಗಾಂಧಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ: ಕಾಂಗ್ರೆಸ್

ಮಾಡರ್ನಾ ಭಾರತದಲ್ಲಿ ಬಳಕೆಯಾಗಲಿರುವ ನಾಲ್ಕನೇ ಕೋವಿಡ್‌ ಲಸಿಕೆಯಾಗಲಿದೆ. ದೇಶದಲ್ಲಿ ಸದ್ಯ ಆಸ್ಟ್ರಾಜೆನೆಕಾದ ಕೋವಿಶೀಲ್ಡ್, ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿಕ್–ವಿ ಲಸಿಕೆ ನೀಡಲು ಅನುಮತಿ ಇದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ನಿಯಂತ್ರಿತ ಬಳಕೆಗಾಗಿ ಮಾಡರ್ನಾ ಕೋವಿಡ್‌–19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾಗೆ ಡಿಸಿಜಿಐ ಅನುಮತಿ ನೀಡಿದೆ. ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ಹೊಸ ಔಷಧಗಳು ಮತ್ತು ಕ್ಲಿನಿಕಲ್‌ ಟ್ರಯಲ್‌ ನಿಯಮಗಳು, 2019ರ ಅನ್ವಯ ಅನುಮತಿ ನೀಡಲಾಗಿದೆ’ ಎಂದು ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here