BIG NEWS | Pfizer-BioNTech ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಇಂಗ್ಲೆಂಡ್ ಸರ್ಕಾರ!

0
843

ಇಂಗ್ಲೆಂಡ್ : ಅಂತೂ ಇಂದು ಮಹಾ ಮಾರಿ ಕೊರೋನಾಗೆ ಕೊನೆಗೂ ಮದ್ದು ಸಿಕ್ಕೇ ಬಿಟ್ಟಿದೆ. ಶೇ.95ರಷ್ಟು ಕೊರೋನಾ ಗುಣಪಡಿಸುವಂತ Pfizer-BioNTech ಲಸಿಕೆ ಬಳಕೆಗೆ ಇಂಗ್ಲೆಂಡ್ ಅನುಮತಿ ನೀಡುವ ಮೂಲಕ, ಕೊರೋನಾ ಲಸಿಕೆ ಕಂಡು ಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಮೂಲಕ ಕೊರೋನಾಗೆ ಕೊನೆಗೂ ಲಸಿಕೇ ಬಂದೇ ಬಿಡ್ತು ಎನ್ನುವ ನಿಟ್ಟುಸಿರುವ ಬಿಡುವಂತೆ ಆಗಿದೆ.

ಮುಂದಿನ ವಾರದಿಂದ ಫಿಜರ್-ಬಯೋಎನ್ ಟೆಕ್ ಲಸಿಕೆಯನ್ನು ಯುನೈಟೆಡ್ ಕಿಂಗ್ ಡಮ್ ಅನುಮೋದಿಸಿದೆ ಎಂಬುದಾಗಿ ತಿಳಿದು ಬಂದಿದೆ. ಇದರೊಂದಿಗೆ, UK ಯು ಫಿಜರ್ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿ ಮತ್ತು COVID-19 ವಿರುದ್ಧ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿ ಹೊರಹೊಮ್ಮಿದೆ.

ಫಿಜರ್ ಇಂಕ್ ಮತ್ತು ಬಯೋನ್ ಟೆಕ್ ಮಂಗಳವಾರ, ತಮ್ಮ COVID-19 ಲಸಿಕೆಯನ್ನು ಷರತ್ತುಬದ್ಧ ದೃಢೀಕರಣಕ್ಕಾಗಿ ಯುರೋಪಿಯನ್ ಔಷಧಗಳ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಯಶಸ್ಸು ಕಂಡಂತ ಯುನೈಟೆಡ್ ಸ್ಟೇಟ್ಸ್ ನ ಫೈಜರ್ ಮತ್ತು ಜರ್ಮನಿಯ ಬಯೋಎನ್ ಟೆಕ್, ಫೈಜರ್ ಲಸಿಕೆ, ಕೊರೋನಾ ಸೋಂಕಿತರನ್ನು ಶೇ.95ರಷ್ಟು ಗುಣಪಡಿಸಲಿದೆ ಎಂಬುದಾಗಿ ತಿಳಿದು ಬಂದಿದೆ. ಇಂತಹ ಲಸಿಕೆ ಕೊರೋನಾ ಸೋಂಕಿತರಿಗಾಗಿ ಉಪಯೋಗಿಸಲು ಇಂಗ್ಲೆಂಡ್ ಸರ್ಕಾರ ಆನುಮತಿಸಿದ್ದು, ಮುಂದಿನ ವಾರದಿಂದ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಲಭ್ಯವಾಗಲಿದೆ

LEAVE A REPLY

Please enter your comment!
Please enter your name here