ಲಾಕ್ಡೌನ್ ಉಲ್ಲಂಘಿಸಿದ ವಾಹನ ಚಾಲಕರಿಗೆ ಕಸ ಎತ್ತುವ ಶಿಕ್ಷೆ..!

0
405
Tap to know MORE!

ಉಡುಪಿ: ಲಾಕ್ಡೌನ್ ನಿಯಮಗಳನ್ನು ಮೀರಿ ರಸ್ತೆಗೆ ಇಳಿಯುವ ಜನರಿಗೆ ಉಡುಪಿಯಲ್ಲಿ ಹೊಸ ರೀತಿಯ ಶಿಕ್ಷೆ ಕೊಡಲಾಗಿದೆ.

ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅದೇ ವಾಹನದಲ್ಲಿ ರಸ್ತೆ ಬದಿಯ ಕಸವನ್ನು ಎತ್ತಿಸುವ ಕೆಲಸ ಮಾಡಿಸಿದ್ದಾರೆ.‌

ರಸ್ತೆಯಲ್ಲಿ ಬಂದ ಟೆಂಪೋ, ಪಿಕಪ್ ವಾಹನಗಳಲ್ಲಿ ಕಸವನ್ನು ಎತ್ತಿದಿ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಬಿದ್ದಿದ್ದ ಕಸದ ತ್ಯಾಜ್ಯವನ್ನು ಅನಗತ್ಯ ಓಟಾಟ ನಡೆಸಿದವರ ವಾಹನಗಳಿಗೆ ಅದರ ಚಾಲಕರಿಂದಲೇ ತುಂಬಿಸಿ ಡಂಪಿಂಗ್ ಯಾರ್ಡಿಗೆ ಮುಟ್ಟಿಸುವಂತೆ ಕೆಲಸ ಕೊಟ್ಟಿದ್ದಾರೆ.

ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸದಂತೆ ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಅಂತಹ ವಾಹನಗಳನ್ನು ಲಾಕ್ಡೌನ್ ಮುಗಿಯುವ ವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here