ಲಾಕ್ಡೌನ್ ಮಧ್ಯೆಯೂ 6.3 ಕೋಟಿ ಊಟವನ್ನು ಪೂರೈಸಿದ “ಅಕ್ಷಯ ಪಾತ್ರ”

0
141
Tap to know MORE!

ಇಸ್ಕಾನ್ ಸಂಸ್ಥಾಪಕ ಆಚಾರ್ಯ ಶ್ರೀಲಾ ಪ್ರಭುಪಾದರ “ಯಾರೂ ಹಸಿವಿನಿಂದ ಇರಬಾರದು” ಎಂಬ ಆಳವಾದ ಸಂದೇಶದೊಂದಿಗೆ, ದೇಶದ ಪ್ರಮುಖ ಸರ್ಕಾರೇತರ ಸಂಸ್ಥೆ “ಅಕ್ಷಯ ಪಾತ್ರ ಫೌಂಡೇಶನ್”ನ ಮೂಲಕ ನಿರ್ಗತಿಕರಿಗೆ 6.3 ಕೋಟಿ ಊಟವನ್ನು ಪೂರೈಸಿದೆ.  ಕೊರೋನಾ ವೈರಸ್ ಹರಡುವಿಕೆಯ ಭೀತಿಯಿಂದ ದೇಶವು ಮಾರ್ಚ್ ೨೫ರಿಂದ ಸಂಪೂರ್ಣ ಲಾಕ್ಡೌನ್ ಆಗಿತ್ತು.

“ಜೂನ್ 11 ರವರೆಗೆ, ನಾವು ದಿನನಿತ್ಯದ ವೇತನ ಪಡೆಯುವವರು, ಕೈಗಾರಿಕಾ ಕಾರ್ಮಿಕರು, ನಿರ್ಮಾಣ ಸ್ಥಳಗಳಲ್ಲಿನ ಕಾರ್ಮಿಕರು ಮತ್ತು ದೇಶದ 17 ರಾಜ್ಯಗಳಲ್ಲಿ ಇತರರು ಸೇರಿದಂತೆ ದುರ್ಬಲ ಸಮುದಾಯದ ಜನರಿಗೆ ಸುಮಾರು 6.3 ಕೋಟಿ (63 ಮಿಲಿಯನ್) ಊಟವನ್ನು ನೀಡಿದ್ದೇವೆ” ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ ತಿಳಿಸಿದರು.

6.3 ಕೋಟಿ ಊಟದಲ್ಲಿ 3.4 ಕೋಟಿ ಬೇಯಿಸಿದ ಭಕ್ಷ್ಯಗಳು ಮತ್ತು 6,86,092 ಆಹಾರದ ಕಿಟ್‌ಗಳು ಸೇರಿವೆ. ಅದಲ್ಲದೆ ಅಗತ್ಯ ದಿನಸಿ ಸಾಮಗ್ರಿಗಳು 2.8 ಕೋಟಿಗಳಷ್ಟು ಹೊಂದಿವೆ ಎಂದರು.

2000 ಇಸವಿಯಲ್ಲಿ ಸ್ಥಾಪನೆಯಾದ ಈ ಫೌಂಡೇಶನ್, ವಿಶ್ವದ ಅತಿದೊಡ್ಡ ಲಾಭರಹಿತ ಸಂಸ್ಥೆಯಾಗಿದ್ದು, ಶಾಲಾ ದಿನಗಳಲ್ಲಿ ಒಟ್ಟು 12 ರಾಜ್ಯಗಳ 19,039 ಶಾಲೆಗಳ 18 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನ ಊಟವನ್ನು ಪೂರೈಸುತ್ತದೆ.  .

“ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆಹಾರದ ಅಭದ್ರತೆಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ, ಏಕೆಂದರೆ ಇದು ಮೂಲಭೂತ ಪೋಷಕಾಂಶಗಳ ಅಸಮರ್ಪಕತೆಯ ಅಡಿಯಲ್ಲಿ ದುರ್ಬಲರಿಗೆ ಆರೋಗ್ಯದ ಅಪಾಯಗಳನ್ನು ಹೆಚ್ಚಿಸುತ್ತದೆ” ಎಂದು ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ್ ವೆಂಕಟ್ ಹೇಳಿದರು.

LEAVE A REPLY

Please enter your comment!
Please enter your name here