ವರದಕ್ಷಿಣೆ ವಿರುದ್ಧ ಹೋರಾಟ: ಒಂದು ದಿನ ಉಪವಾಸ ಕೈಗೊಂಡ ಕೇರಳದ ರಾಜ್ಯಪಾಲ

0
212
Tap to know MORE!

ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಒಂದು ದಿನದ ಉಪವಾಸ ಕೈಗೊಂಡಿದ್ದರು. ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಮಂದಿ ಮಹಿಳೆಯರು ತುತ್ತಾಗಿರುವ ಪ್ರಕರಣ ಖಂಡಿಸಿ ಮತ್ತು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ಉಪವಾಸ ಕೈಗೊಂಡಿದ್ದಾರೆ.

ಜತೆಗೆ ರಾಜಧಾನಿಯಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಕೇರಳದಲ್ಲಿ ಗಾಂಧಿ ತತ್ವ ಅನುಸರಿಸುವ ಹಲವು ಸಂಘಟನೆಗಳು ಜಾಗೃತಿ ಮೂಡಿಸುವ ಉಪವಾಸ ಸತ್ಯಾಗ್ರಹ ಆಯೋಜಿಸಿವೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೇರಳದಲ್ಲಿ ಹೆಚ್ಚಾಗುತ್ತಿದೆ ‘ಝೀಕಾ ವೈರಸ್’ ಪ್ರಕರಣ – ಕರ್ನಾಟಕದಲ್ಲಿ ಎಚ್ಚರ ವಹಿಸುವಂತೆ ಆದೇಶ

ಸಾಮಾಜಿಕ ಸಮಸ್ಯೆಯನ್ನು ಎತ್ತಿ ಹಿಡಿಯಲು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಜನರ ಜತೆ ಸೇರುವುದಾಗಿಯೂ ಅವರು ತಿಳಿಸಿದ್ದರು. ಕಳೆದ ತಿಂಗಳು ವರದಕ್ಷಿಣೆಗೆ ಬಲಿಯಾದ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾದ ಬಳಿಕ ಆರಿಫ್ ಮೊಹಮ್ಮದ್ ಖಾನ್ ಈ ಹೇಳಿಕೆ ನೀಡಿದ್ದರು. ವರದಕ್ಷಿಣೆಯ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಅವಶ್ಯಕತೆಯನ್ನು ರಾಜ್ಯಪಾಲರು ಒತ್ತಿ ಹೇಳಿದ್ದರು.

ವರದಕ್ಷಿಣೆ ಪಿಡುಗು ರಾಜ್ಯದ ಹಲವಾರು ಮಹಿಳೆಯರ ಆತ್ಮಹತ್ಯೆಗೆ ಕಾರಣವಾಗಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ವರದಕ್ಷಿಣೆ ವಿರುದ್ಧ ಸ್ವಯಂಸೇವಕರಾಗಿ ಕೆಲಸ ಮಾಡುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದರು.

LEAVE A REPLY

Please enter your comment!
Please enter your name here