ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಅಂದಾಜು 10.4 ಮಿಲಿಯನ್ ವಲಸಿಗರು ಮನೆಗೆ ಮರಳಿದ್ದಾರೆ ಎಂದು ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ. ಆದರೇ ಎಷ್ಟು ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆಂಬುದಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತ್ಯಾನಂದ್ ರಾಯ್, ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಕಾಳಜಿಯನ್ನು ಹೊಂದಿದೆ. ಲಾಕ್ ಡೌನ್ ಸಮಯದಲ್ಲಿ ಯಾವುದೇ ನಾಗರಿಕನು ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳಿಂದ ವಂಚಿತನಾಗಿಲ್ಲ ಎಂದರು.
ರೋಗ ಹರಡುವುದನ್ನು ತಡೆಯಲು ಕಾರ್ಖಾನೆಗಳು ಸೇರಿದಂತೆ ವ್ಯಾಪಾರ ಸಂಸ್ಥೆಗಳು ಮುಚ್ಚಿದ ಕಾರಣ, ವಲಸೆ ಕಾರ್ಮಿಕರಿಗೆ ಆತಂಕ ಎದುರಾಗಿತ್ತು. ಮಾತ್ರವಲ್ಲದೆ ಲಾಕ್ಡೌನ್ ಎಷ್ಟು ಕಾಲ ಇರುತ್ತದೆ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುವ ಸಂಭವ ಇದೆ ಎಂಬ ಮಾಧ್ಯಮಗಳು ಸೇರಿದಂತೆ ಇತರೆಡೆ ಊಹಾಪೋಹಗಳು ಹಬ್ಬಿದ್ದರಿಂದ ಕಾರ್ಮಿಕರು ತಮ್ಮ ತವರು ರಾಜ್ಯಗಳಾದ ವಲಸೆ ಹೋಗಿದ್ದಾರೆ ಎಂದರು.