ವಾಟ್ಸಾಪ್ ಬಳಕೆದಾರರ ಗಮನಕ್ಕೆ | ಮುಂದಿನ ವರ್ಷದಿಂದ ಕೆಲವು ಮೊಬೈಲ್‌‌ಗಳಲ್ಲಿ ಕಾರ್ಯನಿರ್ವಹಿಸಲ್ಲ ವಾಟ್ಸಾಪ್!

0
202
Tap to know MORE!

ನವದೆಹಲಿ ಡಿ.16: ಜನಪ್ರಿಯ ಫೇಸ್​ಬುಕ್​ ಒಡೆತನದ ವ್ಯಾಟ್ಸ್​ಆ್ಯಪ್​ ಹಳೆಯ ಆ್ಯಂಡ್ರಾಯ್ಡ್​ ಮತ್ತು ಐಒಎಸ್​ನಲ್ಲಿ ಕಾರ್ಯವನ್ನು ಸ್ಥಗಿತ ಮಾಡಲು ಮುಂದಾಗಿದೆ.

ಮುಂದಿನ ವರ್ಷದಿಂದ (2021) ಕೆಲವು ಸ್ಮಾರ್ಟ್​ಫೋನ್​ ಮತ್ತು ಐಫೋನ್​ನಲ್ಲಿ ವ್ಯಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ತಿಳಿಸಿದೆ. ಐಒಎಸ್​ 9 ಮತ್ತು ಆ್ಯಂಡ್ರಾಯ್ಡ್​ 4.0.3 ಅಪರೇಟಿಂಗ್​ ಸಿಸ್ಟಂನಲ್ಲಿ ವ್ಯಾಟ್ಸ್​ಆ್ಯಪ್​ ಬಳಕೆಗೆ ಸಿಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಐಐಟಿ ಮದ್ರಾಸ್ : 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ – ಎಲ್ಲಾ ಪ್ರಯೋಗಾಲಯಗಳು ಸೀಲ್‌ಡೌನ್!

ವಾಟ್ಸ್​ಆ್ಯಪ್ ಈವರೆಗೆ​ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಹೊಸ ವರ್ಷನ್​ಗಳನ್ನು ಬಳಕೆದಾರರಿಗೆ ನೀಡಿದೆ. ಅದರೆ ಐಫೋನ್​ ಐಒಎಸ್​ 9 ಮತ್ತು ಆ್ಯಂಡ್ರಾಯ್ಡ್​ 4.0.5 ಆಪರೇಟಿಂಗ್​ ಸಿಸ್ಟಂನಲ್ಲಿ ಹೊಸ ವರ್ಷನ್​ಗಳು ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ.

ಅನೇಕ ಸ್ಮಾರ್ಟ್​ಫೋನ್​ಗಳು ವ್ಯಾಟ್ಸ್​ಆ್ಯಪ್​ ಮೆಸೇಜಿಂಗ್​ ಆ್ಯಪ್​ ಬೆಂಬಲವಿಲ್ಲದೆ ವಂಚಿತವಾಗಿದೆ. ಅದರಂತೆ ಐಫೋನ್ 4 ಕೂಡ ವ್ಯಾಟ್ಸ್​ಆ್ಯಪ್​ ಬೆಂಬಲಿಸುವುದಿಲ್ಲ. ಐಫೊನ್​ 4ಎಸ್​, ಐಫೋನ್​ 5, ಐಫೋನ್​ 5ಎಸ್​, ಐಫೋನ್​ 6, ಐಫೋನ್​ 6ಎಸ್​​ ಐಒಎಸ್​​ 9 ಆಪರೇಟಿಂಗ್​ ಸಿಸ್ಟಂಗೆ ಅಪ್​ಡೇಟ್​ ಆದ ನಂತರ ವ್ಯಾಟ್ಸ್​ಆ್ಯಪ್​​ ಬಳಕೆಗೆ ಸಿಗಲಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಆ್ಯಂಡ್ರಾಯ್ಡ್​​ 4.0.3 ವರ್ಷನ್​ಗಳಲ್ಲಿ ಬಳಕೆಗೆ ಸಿಗುವುದಿಲ್ಲ. ಜೊತೆಗೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​2, ಹೆಟಿಸಿ, ಡಿಸೈರ್​​, ಎಲ್​ಜಿ ಒಪ್ಪಿಮಸ್​ ಬ್ಲಾಕ್​, ಮೊಟೊರೊಲಾ ಡ್ರೊಯ್ಡ್​​ ರೇಜರ್​ ಮಾಡೆಲ್​ಗಳಲ್ಲಿ ವ್ಯಾಟ್ಸ್​ಆ್ಯಪ್​ ಸಪೋರ್ಟ್ ಆಗುವುದಿಲ್ಲ.

ಇನ್ನು ಮುಂದೆ ವಾಟ್ಸಾಪ್ ಮೂಲಕವೇ ಹಣವನ್ನು ಪಾವತಿಸಿ!

LEAVE A REPLY

Please enter your comment!
Please enter your name here