ಇನ್ನು ಮುಂದೆ ವಾಟ್ಸಾಪ್‌ನಲ್ಲೇ ಪಡೆಯಿರಿ ಕೋವಿಡ್ ಲಸಿಕೆಯ ಪ್ರಮಾಣಪತ್ರ!

0
313
Tap to know MORE!

ನವದೆಹಲಿ(ಆ.09): ವಾಟ್ಸಾಪ್‌ ಸಂದೇಶದ ಮೂಲಕವೇ ಕೋವಿಡ್‌ ಲಸಿಕೆಯ ಪ್ರಮಾಣಪತ್ರ ಪಡೆಯುವ ಹೊಸ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಸೌಲಭ್ಯ ಪಡೆಯಲು, ನೊಂದಾಯಿತ ಮೊಬೈಲ್‌ ಸಂಖ್ಯೆ ಮೂಲಕ ‘Covid Certificate’ ಎಂದು ಟೈಪ್‌ ಮಾಡಿ ಸರ್ಕಾರದ ಅಧಿಕೃತ ಕೊರೋನಾ ಸಹಾಯಡೆಸ್ಕ್‌ +91 90131 51515 ಸಂಖ್ಯೆಗೆ ಕಳಿಸಬೇಕು.

ಆ ಬಳಿಕ 30 ಸೆಕೆಂಡ್‌ನಲ್ಲಿ ಒಟಿಪಿ ಬರಲಿದ್ದು, ಈ ಸಂಖ್ಯೆಯನ್ನು ನಮೂದಿಸಿದರೆ ಕೋವಿಡ್‌ ಪ್ರಮಾಣ ಪತ್ರ ಬರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಟ್ವೀಟ್‌ ಮಾಡಿದೆ. ದೇಶದಲ್ಲಿ ಯಾವುದೇ ವ್ಯಕ್ತಿ ಕೋವಿಡ್‌ ಲಸಿಕೆಯ ಮೊದಲ ಮತ್ತು 2ನೇ ಡೋಸ್‌ ಪಡೆದ ಕೆಲವೇ ಸೆಕೆಂಡ್‌ಗಳಲ್ಲಿ ಆ ವ್ಯಕ್ತಿಯ ಮೊಬೈಲ್‌ಗೆ ಸಂದೇಶದ ಮುಖಾಂತರ ಕೋವಿಡ್‌ ಪ್ರಮಾಣ ಪತ್ರದ ಲಿಂಕ್‌ ಬರುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಾಟ್ಸಪ್‌ನಲ್ಲಿ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಇನ್ನು ಮುಂದೆ ವಾಟ್ಸಾಪ್ ಮೂಲಕವೇ ಹಣವನ್ನು ಪಾವತಿಸಿ!

  • ಮೊದಲಿಗೆ +91 90131-51515 ಸೇವ್‌ ಮಾಡಿಕೊಳ್ಳಿ
  • ಈ ಸಂಖ್ಯೆಗೆ ವಾಟ್ಸಪ್‌ನಲ್ಲಿ Covid Certificate ಎಂದು ಟೈಪ್ ಮಾಡಿ ಕಳಿಸಿ
  • ಕೆಲವೇ ಸೆಕೆಂಡ್‌ಗಳಲ್ಲಿ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರಲಿದೆ
  • ಈ ಒಟಿಪಿ ನಮೂದಿಸಿದರೆ ನಿಮ್ಮ ಕೋವಿಡ್‌ ಪ್ರಮಾಣ ಪತ್ರ (Covid Vaccination Certificate) ತೆರೆದುಕೊಳ್ಳಲಿದೆ.

ಮೊಬೈಲ್ ಸಂಖ್ಯೆ ಸೇವ್ ಮಾಡದೇ ವಾಟ್ಸಾಪ್‌ನಲ್ಲಿ ಪ್ರಮಾಣಪತ್ರ ಪಡೆಯಲು

  • MyGov Corona helpdesk Whatsapp
  • ಮೇಲಿನ ಕೊಂಡಿಯನ್ನು ಬಳಸಿ, ವಾಟ್ಸಾಪ್‌ಗೆ ಹೋಗಿ
  • ಆ ಚಾಟ್‌ನಲ್ಲಿ Coviv Certificate ಎಂದು ನಮೂದಿಸಿ
  • ನಿಮ್ಮ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ.
  • ಪ್ರಮಾಣಪತ್ರ ಸಿಗಲಿದೆ

LEAVE A REPLY

Please enter your comment!
Please enter your name here