ವಿಕಾಸ್ ದುಬೆಯನ್ನು ನಿಜಕ್ಕೂ ಬಂಧಿಸಲಾಗಿದ್ಯಾ? :ಅಖಿಲೇಶ್ ಯಾದವ್

0
222
Tap to know MORE!

ಇಂದು ಬೆಳಗ್ಗೆ ಗ್ಯಾಂಗ್ಸ್ಟರ್ ವಿಕಾಸ್ ದುಬೆಯವರನ್ನು ಉಜ್ಜಯಿನಿ ಮಹಾಕಾಳ ದೇವಸ್ಥಾನದಲ್ಲಿ ಮಧ್ಯಪ್ರದೇಶ ಪೋಲೀಸರು ಬಂಧಿಸಿದ್ದರು.

ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿದ ವಿಕಾಸ್ ದುಬೆಯನ್ನು ಇಂದು ಬಂಧಿಸಿರುವುದರ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಕಾಸ್ ದುಬೆಯನ್ನು ನಿಜಕ್ಕೂ ಬಂಧಿಸಲಾಗಿದೆಯೋ ಅಥವಾ ದೇವಸ್ಥಾನದಲ್ಲಿ ಅವನೇ ಬಂದು ಶರಣಾಗಿದ್ದಾನೋ ಎಂದು ಪ್ರಶ್ನಿಸಿದ್ದಾರೆ.

ಕಾನ್ಪುರ ಪೊಲೀಸ್​ ಎನ್​​ಕೌಂಟರ್​ ಆರೋಪಿ ವಿಕಾಸ್​ ದುಬೆ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆಂಬ ಸುದ್ದಿ ನೋಡಿದೆ. ಆದರೆ ದುಬೆಯನ್ನು ಅರೆಸ್ಟ್​ ಮಾಡಲಾಗಿದೆಯೋ ಅಥವಾ ಅವನೇ ಬಂದು ಶರಣಾಗಿದ್ದಾನೋ ಎಂಬುದನ್ನು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಬೇಕು. ಹಾಗೇ ಆತನ ಕಾಲ್​ ಡಿಟೇಲ್​ ರೆಕಾರ್ಡ್​​ಗಳನ್ನೂ ಸಾರ್ವಜನಿಕರ ಎದುರು ಪ್ರಸ್ತುತ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here