ವಿಚ್ಛೇದನ ಪಡೆದ ಸೆಲೆಬ್ರಿಟಿ ಜೋಡಿ ಅಮೀರ್ ಖಾನ್ – ಕಿರಣ್ ರಾವ್ ದಂಪತಿ |15 ವರ್ಷಗಳ ದಾಂಪತ್ಯ ಜೀವನ ಅಂತ್ಯ

0
148
Tap to know MORE!

ಬಾಲಿವುಡ್‌ನ ಫೇಮಸ್ ಸೆಲೆಬ್ರಿಟಿ ಜೋಡಿ ಅಮೀರ್ ಖಾನ್ ಮತ್ತೆ ಕಿರಣ್ ರಾವ್ ತಮ್ಮ ವಿಚ್ಛೇದನೆಯನ್ನು ಘೋಷಿಸಿದ್ದಾರೆ. ಅಮೀರ್‌ಖಾನ್ ಮತ್ತು ಅವರ ಪತ್ನಿ ಕಿರಣ್‌ರಾವ್ ಜಂಟಿ ಹೇಳಿಕೆಯಲ್ಲಿ ಮದುವೆಯಾದ 15 ವರ್ಷಗಳ ನಂತರ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

“ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ – ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ಜೊತೆ ಇರಲಿದ್ದೇವೆ” ಎಂದು ದಂಪತಿಗಳು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಮಾಜಿ ಸಿಇಒ ಬಿಲ್ ಗೇಟ್ಸ್ – ಮೆಲಿಂಡಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ!

ಈ 15 ಸುಂದರ ವರ್ಷಗಳಲ್ಲಿ ನಾವು ಜೀವಮಾನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ – ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿರುತ್ತೇವೆ ಎಂದಿದ್ದಾರೆ ಕಿರಣ್ ರಾವ್.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ದಂಪತಿಗಳು ತಮ್ಮ ಮಗ ಆಜಾದ್ ರಾವ್ ಖಾನ್ ಅವರ ಸಹ-ಪೋಷಕರಾಗುತ್ತಾರೆ. ಜೊತೆಗೆ ಪಾನಿ ಫೌಂಡೇಶನ್ ಮತ್ತು ‘ಅವರು (ಅವರು) ಭಾವೋದ್ರಿಕ್ತರಾಗಿರುವ ಇತರ ಯೋಜನೆಗಳ ವೃತ್ತಿಪರ ಸಹಭಾಗಿತ್ವವನ್ನು ಮುಂದುವರಿಸುತ್ತಾರೆ’ ಎಂದು ಹೇಳಿದ್ದಾರೆ.

ಲಗಾನ್ ಚಿತ್ರೀಕರಣದ ಸಮಯದಲ್ಲಿ ಅಮೀರ್ ಮತ್ತು ಕಿರಣ್ ಮೊದಲ ಬಾರಿಗೆ ಭೇಟಿಯಾದರು. ಇದರಲ್ಲಿ ಅಮೀರ್ ಖಾನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ಕಿರಣ್ ಸಹಾಯಕ ನಿರ್ದೇಶಕಿಯಾಗಿದ್ದರು. ಅವರು ಡಿಸೆಂಬರ್ 28, 2005 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೀರ್ ಅದಕ್ಕೂ ಮುನ್ನ ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು. ಮೊದಲ ಮದುವೆಯಲ್ಲಿ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಈ ಹಿಂದೆಯೇ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಅಮೀರ್ ಹಾಗೂ ಕಿರಣ್ ಮಕ್ಕಳ ವಿಚಾರಕ್ಕೆ ಬಂದಾಗ ಮಾತ್ರ ಒಂದಾಗುತ್ತಿದ್ದರು. ಒಟ್ಟಿಗೇ ವೆಕೇಷನ್, ಟ್ರಿಪ್‌ಗಳನ್ನು ಎಂಜಾಯ್ ಮಾಡುತ್ತಿದ್ದರು. ಲಾಕ್‌ಡೌನ್ ಸಮಯದಲ್ಲೂ ಈ ಜೋಡಿ ಮಕ್ಕಳೊಂದಿಗೆ ಜೊತೆಯಾಗಿದ್ದರು.

LEAVE A REPLY

Please enter your comment!
Please enter your name here