ಬೆಂಗಳೂರು: ವಿಜಯಪುರ ಜಿಲ್ಲೆಯ ಬುರಾನಾಪುರ ಹಾಗೂ ಮಾಧುಭಾವಿ ಗ್ರಾಮಗಳ ಸಮೀಪದಲ್ಲಿ 220ಕೋ.ರೂ ವೆಚ್ಚದಲ್ಲಿ ಗ್ರೀನ್ ಫೀಲ್ಡ್ ದೇಶೀಯ ಪ್ರಯಾಣದ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ ಲೆವೆಲಿಂಗ್, ಗ್ರೌಂಡ್ ಫಾರ್ ರನ್ ವೇ, ಟ್ಯಾಕ್ಸಿ ವೇ, ಪಾರ್ಕಿಂಗ್ ಪ್ರದೇಶ , ಟರ್ಮಿನಲ್ ಕಟ್ಟಡ, ರನ್ ವೇ ನಿರ್ಮಾಣ ಸಹಿತ ಅಗತ್ಯ ಕಾಮಗಾರಿ 95ಕೋ ರೂ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳು ಯೋಜನೆಗೆ ಒಪ್ಪಿಗೆ ನೀಡಿದ್ದು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.