ಪವರ್ ಲಿಫ್ಟರ್ ಸೂಪರ್ ಕಾಪ್ ವಿಜಯ ಕಾಂಚನ್

0
581
Tap to know MORE!

ವಿಜಯ ಕಾಂಚನ್ ಈ ಹೆಸರು ಸಾಮಾನ್ಯರಿಗೆ ಅಷ್ಟೊಂದು ಪರಿಚಿತವಲ್ಲದ್ದಿದ್ದರೂ ತಮ್ಮ ಪೋಲಿಸ್ ಕರ್ತವ್ಯದ ಮೂಲಕ ಅಪರಾಧಿಗಳಿಗೆ ಈ ಹೆಸರು ನಿದ್ದೆಯಲ್ಲಿಯೂ ಭಯಪಡಿಸುವಂತದ್ದು .ಇದಕ್ಕೆಲ್ಲ ಕಾರಣ ಅವರ ಅಜಾನುಬಾಹು ದೇಹ ಮತ್ತು ಬಲಿಷ್ಠ ತೋಳುಗಳು. ಹುರಿಗೊಳಿಸಿ ತಿರುಗಿಸಿದ ಮೀಸೆಯ ಮೇಲೆ ಕೈ ಹಿಡಿದು ನಿಂತರೆ ಎಂತಹವರಾದರೂ ಒಂದು ಬಾರಿ ಬೆರಗು ಕಣ್ಣಿನಿಂದ ನೋಡುವುದಂತು ಸತ್ಯ. ದೇಹದಾರ್ಡ್ಯ ಮತ್ತು ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿನ ಇವರ ಸಾಧನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದರೂ ಸಾಧನೆಗೆ ಮಿತಿಯಿಲ್ಲ ಎಂಬ ಮಾತಿನಂತೆ ತಮ್ಮ ಕರ್ತವ್ಯದ ನಡುವೆಯೂ ಹಲವಾರು ಮಂದಿಗೆ ತರಬೇತಿ ನೀಡುತ್ತಾ ತಮ್ಮ ಮುಂದಿನ ಸಾಧನೆಗೆ ತಯಾರಿ ನಡೆಸುತ್ತಿದ್ದಾರೆ.

ವಿಜಯ್ ಕಾಂಚನ್

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಇವರು 24 ಜುಲೈ 1968ರಲ್ಲಿ ಲಕ್ಷ್ಮೀ ಕಾಂಚನ್ ಮತ್ತು ಲೋಕಯ್ಯ ಶ್ರೀಯನ್ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಕಾಲೇಜು ದಿನಗಳಲ್ಲೆ ದೇಹದಾರ್ಡ್ಯದ ಕಡೆಗೆ ಒಲವು ಹೊಂದಿದ್ದ ಇವರು ಅದಕ್ಕಾಗಿ ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆಯಲ್ಲಿ ತಯಾರಿ ನಡೆಸಿ 1989ರಲ್ಲಿ ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ತಮ್ಮ ಗೆಲುವಿನ ಬೇಟೆಯನ್ನು ಆರಂಭಿಸಿದರು. ಹುಟ್ಟಿದ್ದೇ ಗೆಲ್ಲುವುದಕ್ಕಾಗಿ ಎಂಬ ಧ್ಯೇಯ ವಾಕ್ಯವನ್ನು ತಮ್ಮ ಜೀವನದಲ್ಲಿ ರೂಡಿಸಿದ ವಿಜಯ ಕಾಂಚನ್ ಮತ್ತೆಂದೂ ತಮ್ಮ ಪ್ರಯತ್ನದಿಂದ ವಿಮುಖರಾದವರಲ್ಲ.1994 ರಲ್ಲಿ ಪೋಲಿಸ್ ಇಲಾಖೆಗೆ ಸೇರಿದ ಇವರು ಇಲಾಖೆಯಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಛಾಪು ಮೂಡಿಸಿದ್ದಾರೆ. ಮಂಗಳೂರಿನ ಹಲವಾರು ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ತಮ್ಮ ಕರ್ತವ್ಯದ ಮೇಲಿನ ದಕ್ಷತೆಯ ಮೂಲಕ ಜನಜನಿತರಾದವರು. ರೌಡಿನಿಗ್ರಹ ದಳದಲ್ಲಿನ ಇವರ ಕಾರ್ಯವೈಖರಿ ಇವರಿಗೆ ಇನ್ನಷ್ಟು ಕೀರ್ತಿ ತಂದುಕೊಟ್ಟಿತು. ಇವರ ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2012 ರಲ್ಲಿ ಕರ್ನಾಟಕದ ಆಗಿನ ಮುಖ್ಯಮಂತ್ರಿ ಸದಾನಂದ ಗೌಡ ಇವರು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದರು.

#peoplespadma | 2022ರ ಪದ್ಮ ಪ್ರಶಸ್ತಿಗೆ ವ್ಯಕ್ತಿಗಳನ್ನು ಹೆಸರಿಸಲು ವಿನಂತಿಸಿದ ಪ್ರಧಾನಿ ಮೋದಿ

ಕಾಂಚನ್ ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ವಿಭಾಗದಲ್ಲಿ 5 ಪದಕಗಳನ್ನು ಪಡೆದಿದ್ದಾರೆ ಹಾಗೂ ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಡೆದ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ. ಇವರು ಪ್ರಸ್ತುತ ಎಕೊನಾಮಿಕ್ ಆಂಡ್ ನಾರ್ಕೊಟಿಕ್ ಪೊಲೀಸ್ ಠಾಣೆ ಪಾಂಡೇಶ್ವರ ಇಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಾ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಹಲವಾರು ಶಿಷ್ಯಂದಿರಿಗೆ ಪ್ರೀತಿಯ ಗುರು ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಇವರು ಉದಾಹರಣೆಯಾಗಿ ಯುವಜನತೆಗೆ ಪ್ರೇರಣೆಯಾಗಿದ್ದಾರೆ‌.

ಸುರೇಶ್ ರಾಜ್, ಪಕ್ಷಿಕೆರೆ

LEAVE A REPLY

Please enter your comment!
Please enter your name here