ಮೂಗಿಗೆ ನಾಲ್ಕು ಹನಿ ಲಿಂಬೆರಸ ಹಾಕಿದಾಗ, ಆಕ್ಸಿಜನ್ ಸಮಸ್ಯೆ ನಿವಾರಣೆ: ಡಾ| ಸಂಕೇಶ್ವರ್

0
124
ವಿಜಯ್ ಸಂಕೇಶ್ವರ್
Tap to know MORE!

ಹುಬ್ಬಳ್ಳಿ: ಕೊರೊನಾ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೋವಿಡ್ ಸೋಂಕುಳ್ಳವರು ವೈದ್ಯಕೀಯ ಚಿಕಿತ್ಸೆ ಜೊತೆಗೆ ಮನೆ ಮದ್ದುಗಳನ್ನು ಬಳಸಿದರೆ ಕೊರೊನಾ ನಿಯಂತ್ರಿಸಬಹುದು ಎಂದು ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು, ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದರು.

ಮೂಗಿನಲ್ಲಿ ಲಿಂಬೆರಸ ಹಾಕುವುದರಿಂದ ಲಂಗ್ಸ್‌ನಲ್ಲಿರುವ ಕಫ ಹೊರ ಬರುತ್ತದೆ. ಆಕ್ಸಿಜನ್ ಪ್ರಮಾಣ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಕೇಶ್ವರ್ ನುಡಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೊರೊನಾಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವುದು ನಿಜ. ಅವರು ಹೇಳುವ ಚಿಕಿತ್ಸಾ ಪದ್ದತಿಯನ್ನು ಅನುಸರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಆದರೆ ಕೊರೊನಾ ವಿರುದ್ಧ ಹೋರಾಡಲು ಮನೆಮದ್ದು ಕೂಡ ತುಂಬ ಸಹಾಯಕಾರಿಯಾಗಬಲ್ಲದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ ಎಂದು ವಿಜಯ್ ಸಂಕೇಶ್ವರ್ ಸ್ಪಷ್ಟಪಡಿಸಿದರು.

ಎಲ್ಲರೂ ಬಿಸಿ ನೀರು ಕಡ್ಡಾಯವಾಗಿ ಕುಡಿಯಲೇಬೇಕು. ನಿತ್ಯವೂ ಸ್ಟೀಮ್ ತೆಗೆದುಕೊಳ್ಳಬೇಕು. ಯಾವಾಗಲೂ ಮಾಸ್ಕ್ ಹಾಕುವುದರಿಂದ ಆಮ್ಲಜನಕ ಸರಿಯಾಗಿ ಸರಬರಾಜು ಆಗುವುದಿಲ್ಲ. ಹಾಗಾಗಿ, ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ಸಂಕೇಶ್ವರ್ ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here