ವಿಟಿಯು ಪರೀಕ್ಷೆ : ಆಳ್ವಾಸ್ ಎಂಬಿಎ ವಿದ್ಯಾರ್ಥಿನಿ ಜೊವಿಟಾಗೆ ೫ನೇ ರ‍್ಯಾಂಕ್

0
309
Tap to know MORE!

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಡೆಸಿದ ಅಂತಿಮ ಪರೀಕ್ಷೆಗಳಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿನಿ ಜೊವಿಟಾ ನೊರೋನ್ಹಾ ೫ನೇ ರ‍್ಯಾಂಕ್ ಗಳಿಸಿದ್ದಾರೆ. ಸಿಜಿಪಿ ೮.೬೨ ಅಂಕ ಗಳಿಸುವ ಮೂಲಕ ಜೊವಿಟಾ ಈ ಸಾಧನೆ ಮಾಡಿದ್ದಾರೆ.

ಕ್ಯಾಂಪಸ್ ಸೆಲೆಕ್ಷನ್ ಮೂಲಕ ಬೆಂಗಳೂರಿನ ಗ್ರಾಂಟ್ ಥಾರ್ನ್ಟನ್ ಕಂಪನಿಗೆ ಆಯ್ಕೆಯಾಗಿರುವ ಅವರು ಪ್ರಸ್ತುತ ಟ್ಯಾಕ್ಸ್ ಅನಾಲಿಸ್ಟ್ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.

೨೦೧೮-೨೦ರ ಶೈಕ್ಷಣಿಕ ಬ್ಯಾಚ್‌ನಲ್ಲಿ ಆಳ್ವಾಸ್ ಎಂಬಿಎ ವಿಭಾಗದ ೭೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here