ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿರಲು ಅವಕಾಶ ನೀಡಲ್ಲ: ಅಮೆರಿಕ

0
222
Tap to know MORE!

ಕೊರೋನವೈರಸ್ ಬಿಕ್ಕಟ್ಟಿನಿಂದಾಗಿ, ಎಲ್ಲಾ ತರಗತಿಗಳನ್ನು ಆನ್‌ಲೈನ್‌ನಲ್ಲಿ ಮುಂದುವರೆಸಿದರೆ, ವಿದೇಶಿ ವಿದ್ಯಾರ್ಥಿಗಳಿಗೆ ದೇಶದಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ ಎಂದು ಅಮೇರಿಕಾ ಸೋಮವಾರ ಹೇಳಿದೆ.

“ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುವ ಶಾಲಾ-ಕಾಲೇಜುಗಳಿಗೆ ಹಾಜರಾಗುವ ವಲಸೆರಹಿತ ಎಫ್ -1 ಮತ್ತು ಎಂ -1 ವಿದ್ಯಾರ್ಥಿಗಳು ಪೂರ್ಣ ಆನ್‌ಲೈನ್ ಕೋರ್ಸ್ ಗಳನ್ನು ತೆಗೆದುಕೊಳ್ಳದೇ ಅಮೇರಿಕಾದಲ್ಲಿಯೇ ಉಳಿಯಬಹುದು” ಎಂದು ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ ಎನ್‌ಫೋರ್ಸ್‌ಮೆಂಟ್ (ಐಸಿಇ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ನಲ್ಲಿ ಈಗಾಗಲೇ ಆನ್ಲೈನ್ ತರಗತಿಯಗಳಿಗೆ ಸೇರ್ಪಡೆಗೊಂಡಿರುವ ವಿದೇಶಿ ವಿದ್ಯಾರ್ಥಿಗಳು ದೇಶವನ್ನು ತೊರೆಯಬೇಕು ಅಥವಾ ಕಾನೂನುಬದ್ಧವಾಗಿ ದೇಶದಲ್ಲಿಯೇ ಉಳಿದುಕೊಳ್ಳಲು ಆನ್ಲೈನ್ ನಿಂದ ಆಫ್ಲೈನ್ ಗೆ ವರ್ಗಾಯಿಸುವಂತಹ ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಐಸಿಇ ಹೇಳಿದೆ.

ಅಮೇರಿಕಾದ ಹೆಚ್ಚಿನ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಕಾರ್ಯ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ.

ಶೇ.40 ರಷ್ಟು ಪದವಿಪೂರ್ವ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗೆ ಮರಳಲು ಅವಕಾಶ ನೀಡಲಾಗುವುದು. ಆದರೆ ಅವರಿಗೆ ನೀಡುವ ಸೂಚನೆಗಳೆಲ್ಲವೂ ಆನ್‌ಲೈನ್‌ನಲ್ಲಿರುತ್ತದೆ ಎಂದು ಹಾರ್ವರ್ಡ್ ಹೇಳಿದೆ.

ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ (ಐಐಇ) ಪ್ರಕಾರ, 2018-19ನೇ ಶೈಕ್ಷಣಿಕ ವರ್ಷದಲ್ಲಿ ಅಮೇರಿಕಾದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಇದ್ದರು.

ಇದು ಅಮೇರಿಕಾದ ಒಟ್ಟು ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಶೇಕಡಾ 5.5 ರಷ್ಟಿದೆ ಎಂದು ಐಐಇ ಹೇಳಿದೆ ಮತ್ತು 2018 ರಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಯುಎಸ್ ಆರ್ಥಿಕತೆಗೆ $44.7 ಬಿಲಿಯನ್ ಕೊಡುಗೆ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಚೀನಾದಿಂದ ಬಂದಿದ್ದರೆ, ಭಾರತ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ ಮತ್ತು ಕೆನಡಾ ನಂತರದ ಸ್ಥಾನದಲ್ಲಿವೆ.

LEAVE A REPLY

Please enter your comment!
Please enter your name here