ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ!

0
151
ವಿದ್ಯಾರ್ಥಿನಿ ಆತ್ಮಹತ್ಯೆ ಪಿಯುಸಿ ಎಂಬಿಬಿಎಸ್ MBBS aspirant suicide
Tap to know MORE!

ಶಿವಮೊಗ್ಗ ಡಿ.28: ಎಂಬಿಬಿಎಸ್ ಪದವಿ ಪಡೆದು ವೈದ್ಯೆಯಾಗುವ ಕನಸು ಈಡೇರಲಿಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಭಾನುವಾರ ರಾತ್ರಿ ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಂದ್ರಗುತ್ತಿ ಹೋಬಳಿ ಚನ್ನಪಟ್ಟಣದ ಸಂಕಲ್ಪ ಮೃತ ದುರ್ದೈವಿ.

ದ್ವಿತೀಯ ಪಿಯುಸಿ (ವಿಜ್ಞಾನ) ಯಲ್ಲಿ ಪ್ರತಿಶತ 96 ಅಂಕ ಪಡೆದು ಉತ್ತೀರ್ಣಳಾಗಿದ್ದ ಸಂಕಲ್ಪ ಎಂಬಿಬಿಎಸ್ ಓದಬೇಕು ಎಂದು ಕನಸು ಕಂಡು ಎರಡು ಬಾರಿ ನೀಟ್ ಪರೀಕ್ಷೆ ಬರೆದರೂ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಮನನೊಂದು ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ತನ್ನ ಕೋಣೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರು : ಡೆತ್‌ನೋಟ್ ಬರೆದಿಟ್ಟು ಪೋಲೀಸ್ ದಂಪತಿ ಆತ್ಮಹತ್ಯೆ..!

ಸಂಕಲ್ಪಗೆ 5ನೇ ತರಗತಿಯಲ್ಲಿದ್ದಾಗ ಹೃದಯಾಘಾತವಾಗಿ ಶಸ್ತ್ರಚಿಕಿತೆಗೊಳಗಾಗಿ ಚೇತರಿಸಿಕೊಂಡಿದ್ದಳು. ಅಂದಿನಿಂದ ಡಾಕ್ಟರ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ನೀಟ್​ನಲ್ಲಿ ನಿರೀಕ್ಷಿತ ಅಂಕ ಗಳಿಸಲಾಗದ ಕಾರಣ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಮ್ಯಾನೇಜ್​ವೆುಂಟ್ ಕೋಟಾದಲ್ಲಿ ಎಂಬಿಬಿಎಸ್​ಗೆ ಪ್ರವೇಶ ಪಡೆಯಲು ಲಕ್ಷಾಂತರ ರೂ. ಹಣ ಬೇಕು, ನಮಗೆ ಇದು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಳು. ಅದರೆ ಮನೆಯವರು ಬಿಎಎಂಎಸ್ ಮಾಡಿದರಾಯಿತು ಎಂದು ಹೇಳಿದರೂ ಆಕೆ ಒಪ್ಪುತ್ತಿರಲಿಲ್ಲ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಂಕಲ್ಪ ಅವರ ತಂದೆ, ತಾಯಿ ಇಬ್ಬರು ಗ್ರಾಪಂ ಮಾಜಿ ಅಧ್ಯಕ್ಷರು. ತಂದೆ ಈಶ್ವರಪ್ಪ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪದಾಧಿಕಾರಿಯಾಗಿದ್ದಾರೆ. ಸಂಕಲ್ಪಗೆ ಓರ್ವ ತಮ್ಮನಿದ್ದಾನೆ. ಮೃತಳ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮದಲ್ಲಿ ನೆರವೇರಿತು.

ಬೆಂಗಳೂರು : ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ| ಸ್ನೇಹಿತರ ಮನೆಯಲ್ಲಿ ನೇಣಿಗೆ ಶರಣು

LEAVE A REPLY

Please enter your comment!
Please enter your name here