ಶಿವಮೊಗ್ಗ: ಸೊರಬ ಪಟ್ಟಣದ ಕಾನಕೇರಿಯಲ್ಲಿ ಮನೆ ಮುಂಭಾಗದ ಗೇಟಿಗೆ, ಹುಚ್ಚುನಾಯಿ ಹಾವಳಿಯಿಂದ ತಪ್ಪಿಸಲು ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
58 ವರ್ಷದ ನಿಂಗಪ್ಪ ಮೃತಪಟ್ಟ ವ್ಯಕ್ತಿ. ಹುಚ್ಚುನಾಯಿ ಮನೆಗೆ ನುಗ್ಗುವ ಭೀತಿಯಿಂದ ಅವರು ಗೇಟಿಗೆ ತಂತಿ ಕಟ್ಟಿ ವಿದ್ಯುತ್ ಹರಿಬಿಟ್ಟಿದ್ದರು. ಆದರೆ, ನಿಂಗಪ್ಪ ತಾವೇ ಗೇಟ್ ಗೆ ಹಾಯಿಸಿದ್ದ ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅವರ ಪುತ್ರ ಸೊರಬ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.