ಸ್ಪರ್ಧೆಯಲ್ಲಿ ಬಹುಮಾನದ ಅಪೇಕ್ಷೆ ಇಲ್ಲದೆ ಸ್ಪರ್ಧಾ ಮನೋಭಾವದಿಂದ ಪಾಲು ಪಡೆಯಬೇಕು : ವಿನೋದ್ ಬೊಳ್ಳೂರು

0
178
Tap to know MORE!

ಪ್ರಸ್ತುತ ಕೊರೋನಾ ಸಾಂಕ್ರಾಮಿಕ ನಿಮಿತ್ತ ಶಾಲಾ ಕಾಲೇಜು ಮಕ್ಕಳಿಗೆ ಈ ವರ್ಷದ ವಿದ್ಯಾರ್ಜನೆಗೆ ಕಷ್ಟವಾಗಿದ್ದು ಅಲ್ಲದೆ ಯಾವುದೇ ರೀತಿಯ ಇತರ ಕ್ರೀಡೆ, ಸಾಂಸ್ಕೃತಿಕ ಮನೋರಂಜನೆ ಇಲ್ಲದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ, ಯುವಕ ಮಂಡಲ ನಿರಂತರವಾಗಿ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ ನಡೆಸುತ್ತಾ ಬಂದಿದೆ ಹಾಗೂ ಇಂದು ನಡೆಸಿರುವ ಚಿತ್ರ ಕಲಾ ಸ್ಪರ್ಧೆಯು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಸುಂದರ ಅವಕಾಶ ಹಾಗೂ ಮಕ್ಕಳು ಬಹುಮಾನ ಅಪೇಕ್ಷೆ ಇಲ್ಲದೆ ಸ್ಪರ್ಧಾ ಮನೋಭಾವದಿಂದ ಪಾಲು ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಬೊಳ್ಳೂರು ಹೇಳಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಆಶ್ರಯದಲ್ಲಿ, ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯಂಗಡಿ, ಪಾವಂಜೆ ಮತ್ತು ಪಡುಪಣಂಬೂರು ಇಲ್ಲಿನ ವಿದ್ಯಾರ್ಥಿಗಳಿಗೆ ನಡೆದ “ಚಿತ್ರಕಲಾ ಸ್ಪರ್ಧೆ – 2020” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಹೋಟೆಲ್ ಸಾಯಿಲಿಲಾ ಮತ್ತು ಸಾಯಿ ಬಜಾರ್ ಇದರ ಮಾಲಕರಾದ ಶ್ರೀ ಜಗನ್ನಾಥ ವಿ. ಸಾಲ್ಯಾನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೀವನ್ ಪ್ರಕಾಶ್ ಕಾಮೆರೊಟ್ಟು, ನೆಹರೂ ಯುವ ಕೇಂದ್ರ ಮಂಗಳೂರು ಇದರ ಪ್ರತಿನಿಧಿಗಳಾದ ಶ್ರೀ ಪ್ರೀತೇಶ್ ಸೋನಲಿಕೆ ಮಂಗಳೂರು, ಕುಮಾರಿ ಸುಶ್ಮಿತಾ ಬಿ ಆರ್ ಮೂಡಬಿದ್ರೆ ಪಾಲು ಪಡೆದಿದ್ದರು.

ವಿನೋದ್ ಬೊಳ್ಳೂರು, ಹಳೆಯಂಗಡಿ, Mangalore news


ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಟ್ರಸ್ಟಿನ ಪ್ರಧಾನ ಕಾರ್ಯ ದರ್ಶಿ ಶ್ರೀ ಸ್ಟ್ಯಾನಿ ಡೀ ಕೋಸ್ಟಾ, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಉಪಸ್ಥಿತರಿದ್ದರು

ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಸರ್ವರನ್ನು ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಇಂದುಧರ್ ಕಿಣಿ ಧನ್ಯವಾದ ಅರ್ಪಿಸಿದರು.

ಆಗಮಿಸಿದ ಎಲ್ಲಾ ಮಕ್ಕಳಿಗೆ ಹಾಗೂ ಜಂಟಿ ಸಂಸ್ಥೆಯ ಸದಸ್ಯರಿಗೆ ವಿಶೇಷ ಉಪಹಾರದ ವ್ಯವಸ್ಥೆ ಮಾಡಲಾಯಿತು. ಜಂಟಿ ಸಂಸ್ಥೆಯ ಹೆಚ್ಚಿನ ಸದಸ್ಯರು, ಮಕ್ಕಳ ಪೋಷಕರು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here