ಬೆಂಗಳೂರು : ರಾಜ್ಯದ ವಿವಿಧ ವಿಶ್ವ ವಿದ್ಯಾನಿಲಯಗಳು ದೂರ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಇದೀಗ ಇಂತಹ ವ್ಯವಸ್ಥೆಯನ್ನು ರದ್ದುಗೊಳಿಸಿ ಇನ್ನು ಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾತ್ರವೇ ದೂರ ಶಿಕ್ಷಣಕ್ಕೆ ಅನುವು ಮಾಡುವ ನಿರ್ಧಾರಕ್ಕೆ ಸರಕಾರ ಮುಂದಾಗಿದೆ.
ರಾಜ್ಯದ ವಿವಿಧ ಸಾಂಪ್ರಾದಾಯಿಕ ವಿವಿ ಗಳು ದೂರ ಶಿಕ್ಷಣ ನೀಡುತ್ತಿದ್ದು ಅದನ್ನು ರದ್ದುಗೊಳಿಸಿ ಮುಕ್ತ ವಿವಿ ಗೆ ಮಾತ್ರ ಅನುಮತಿ ಕೊಡುವ ವಿಚಾರವು ಹಲವು ವರ್ಷಗಳಿಂದ ಚರ್ಚೆಯಲ್ಲಿತ್ತು. ಅದರಂತೆ ಕಳೆದ ವರ್ಷ ರಾಜ್ಯಪಾಲರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿವರಣೆ ಕೇಳಿದ್ದರು. ಈ ಪ್ರಕಾರ ಕಳೆದ ವರ್ಷ ಡಿಸೆಂಬರ್ ನಲ್ಲಿ ಮುಕ್ತ ವಿವಿ ಗೆ ಮಾತ್ರ ಅವಕಾಶ ಕೊಡುವುದುದಾಗಿ ಉನ್ನತ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಸರಕಾರವು ಇದೇ ನಿರ್ಣಯವನ್ನು ಜಾರಿಗೆ ತರಲು ನಿರ್ಧರಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ 5 ವಿವಿಗಳು ಇತರ ಕೋರ್ಸ್ ಗಳೊಂದಿಗೆ ಶಿಕ್ಷಣ ಕೋರ್ಸ್ ನಡೆಸುತ್ತಿವೆ. ಆದರೆ ದೂರ ಶಿಕ್ಷಣ ಕೋರ್ಸ್ ಮಾತ್ರವೇ ನಡೆಸುತ್ತಿರುವ ಕರ್ನಾಟಕ ಮುಕ್ತ ವಿವಿಯ ಆದಾಯಕ್ಕೆ ಇದರಿಂದ ಕುತ್ತು ಬಂದಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.