ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿ ಇಂದಿನ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅಗ್ರ 10 ಶ್ರೀಮಂತ ಜನರ ವಿಶೇಷ ಕ್ಲಬ್ ನಲ್ಲಿ ಸ್ಥಾನ ಪಡೆದಿದ್ದಾರೆ.
64.5 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಂಬಾನಿ, ಪ್ರಸ್ತುತ ವಿಶ್ವದ ಅಗ್ರ ಬಿಲಿಯನೇರ್ಗಳ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಅವರ ನಿವ್ವಳ ಮೌಲ್ಯ 5.3 ಬಿಲಿಯನ್ ಡಾಲರ್ ಇತ್ತು. ಈಗ, ಎರಡು ತಿಂಗಳಲ್ಲಿ ಮೌಲ್ಯವು 12 ಪಟ್ಟು ಹೆಚ್ಚಾಗಿದೆ. ಇದೀಗ ಇವರ ನಿವ್ವಳ ಮೌಲ್ಯ 64.6 ಬಿಲಿಯನ್ ಬಿಲಿಯನ್ ಡಾಲರ್.
ಭಾರತ ಸೇರಿದಂತೆ, ಇಡೀ ವಿಶ್ವವು ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ಕಂಡರೂ, ಬಿಲಿಯನೇರ್ಗಳ ಪಟ್ಟಿಯಲ್ಲಿ ಅಂಬಾನಿಯವರ ಸ್ಥಾನ ಏರಿಕೆಯಾಗಿದೆ. ಅಂಬಾನಿಯವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ 42% ನಷ್ಟು ಪಾಲನ್ನು ಹೊಂದಿದ್ದಾರೆ ಮತ್ತು ಕಂಪನಿಯು ಇತ್ತೀಚೆಗೆ ನಿವ್ವಳ -ಋಣಮುಕ್ತ ಎಂದು ಘೋಷಿಸಿತ್ತು. ಅದಲ್ಲದೆ ರಿಲಯನ್ಸ್ನ ಡಿಜಿಟಲ್ ಪ್ಲಾಟ್ಫಾರ್ಮ್- ಜಿಯೋಗೆ ಬಹಳಷ್ಟು ಹೂಡಿಕೆಗಳು ಬಂದಿತ್ತು.