ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯತ್ವವನ್ನು ಅಧಿಕೃತವಾಗಿ ಹಿಂಪಡೆದ ಅಮೇರಿಕಾ!

0
211
Tap to know MORE!

ಟ್ರಂಪ್ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವ ಬಗ್ಗೆ ಅಧಿಕೃತವಾಗಿ ವಿಶ್ವ ಸಂಸ್ಥೆಗೆ ತಿಳಿಸಿದೆ. ಆದರೆ ಇದು ಮುಂದಿನ ವರ್ಷದವರೆಗೆ ಜಾರಿಗೆ ಬರುವುದಿಲ್ಲ. ಅಂದರೆ ಮುಂದೆ ಪರಿಸ್ಥಿತಿಗಳು ಬದಲಾದರೆ ಅಥವಾ ಹೊಸ ಆಡಳಿತದ ಅಡಿಯಲ್ಲಿ ಇದನ್ನು ರದ್ದುಗೊಳಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆಯು ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸರಿಯಾಗಿ ಪ್ರತಿಕ್ರಿಯಿಸದೇ ಇರುವುದಕ್ಕಾಗಿ ಮತ್ತು ಸಂಸ್ಥೆಯು ಚೀನಾದ ಪ್ರಭಾವಕ್ಕೆ ಮಣಿದ ಆರೋಪದ ಮೇಲೆ ಅವರು ಅಮೇರಿಕಾ ಅಧ್ಯಕ್ಷ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ.

ಈ ಕ್ರಮವನ್ನು ಆರೋಗ್ಯ ಅಧಿಕಾರಿಗಳು ಮತ್ತು ಆಡಳಿತದ ವಿಮರ್ಶಕರು ಟೀಕಿಸಿದ್ದಾರೆ. ಪ್ರಜಾಪ್ರಭುತ್ವವಾದಿಗಳು ಸೇರಿದಂತೆ ಹಲವರು, ಜಾಗತಿಕ ರಂಗದಲ್ಲಿ ಅಮೆರಿಕಾದ ಪ್ರಭಾವದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಅಮೇರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಅವರು ಆರೋಗ್ಯ ಸಂಸ್ಥೆಯನ್ನು ಬೆಂಬಲಿಸುತ್ತಿದ್ದಾರೆಂದು ಹೇಳಿದ್ದಾರೆ ಮತ್ತು ನವೆಂಬರ್‌ನ ಚುನಾವಣೆಯಲ್ಲಿ ಟ್ರಂಪ್‌ರನ್ನು ಸೋಲಿಸಿದರೆ, ಈ ನಿರ್ಧಾರವನ್ನು ಹಿಂಪಡೆಯುವುದಾಗಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here