ಅಯ್ಯೋ ! ವೆಂಕಟರಮಣ
ಎಲ್ಲೆಲ್ಲೂ ಆವರಿಸಿದೆ ಕೊರೋನಾ
ಹದಗೆಡುತ್ತಿದೆ ಜನರಜೀವನ
ನಿವಾರಿಸೋ ಬೇಗ ಇದನ್ನ
ದಿನಾ ಬೀಳುತ್ತಿದೆ ಅದೆಷ್ಟು ಹೆಣ
ಕೆಲಸ ಹೋಗಿದೆ, ಕೈಯಲ್ಲಿಲ್ಲ ಹಣ
ತೋರಬಾರದೆ ಕರುಣ
ಬಿಡುವುದಿಲ್ಲ ನಿನ್ನ ಚರಣ
ಪ್ರತಿದಿನದ ಸುದ್ದಿ ಬರೀ ಕೊರೋನಾ
ಲಾಕ್ಡೌನ್ನಿಂದ ಎಲ್ಲಾ ಭಣಭಣ
ಮಾರ್ಕೆಟ್ನಲ್ಲೂ ಕಾಣೋದಿಲ್ಲ ಜನ
ನೆಮ್ಮದಿಯಿಲ್ಲ, ಮುಚ್ಚೋದಿಲ್ಲ ನಯನ
ಶಾಲೆ-ಕಾಲೇಜಿಲ್ಲ ಎಲ್ಲಿಂದ ಬರಲಿ ಶಿಕ್ಷಣ
ಕಳೆದುಹೋಗುತ್ತಿದೆ ಅಮೂಲ್ಯ ಕ್ಷಣ
ಬಾರೋ ವೆಂಕಟರಮಣ
ನಿವಾರಿಸೋ ಬೇಗ ಕೊರೋನಾ…!
ದೀಕ್ಷಿತಾ
ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು