ಕೋವಿಡ್ ‘POSITIVE’: 10 ದಿನ ವೆಂಟಿಲೇಟರ್ ಸಹಾಯದಲ್ಲಿದ್ದರೂ ಕೊರೋನಾ ಗೆದ್ದ 1 ತಿಂಗಳ ಹೆಣ್ಣುಮಗು!

0
177
Tap to know MORE!

ಭುವನೇಶ್ವರ, ಮೇ 15: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದೇ ರೀತಿ ಕೊರೊನಾ ಸೋಂಕಿಗೆ ಸಾವು-ನೋವುಗಳು ಹೆಚ್ಚಾಗಿವೆ.

ಆದರೆ, ಸಮಾಧಾನಕರ ಸುದ್ದಿ ಹಾಗೂ ಅಚ್ಚರಿ ಘಟನೆಯೊಂದು ಓಡಿಶಾದ ಭುವನೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ. ಕೋವಿಡ್-19 ಸೋಂಕಿಗೆ ಒಳಗಾದ ಒಂದು ತಿಂಗಳ ವಯಸ್ಸಿನ ಗುಡಿಯಾ ಎಂಬ ಮಗು ಚೇತರಿಸಿಕೊಂಡಿದೆ.

ಕೋವಿಡ್ ‘POSITIVE’: 92ರ ವೃದ್ಧೆ, 9ರ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಎಲ್ಲಾ 11 ಸೋಂಕಿತರು ಗುಣಮುಖ!

ಭುವನೇಶ್ವರ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ 10 ದಿನಗಳ ಕಾಲ ಕೋವಿಡ್ ಚಿಕಿತ್ಸೆಯಲ್ಲಿದ್ದ ಮಗು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಇದೂ ಪವಾಡಕ್ಕಿಂತ ಏನೂ ಕಡಿಮೆಯಿಲ್ಲ ಎಂದು ಅವಳಿಗೆ ಚಿಕಿತ್ಸೆ ನೀಡಿದ ಡಾ.ಅರ್ಜಿತ್ ಮೋಹಪಾತ್ರ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಾರತ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,26,098 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ 3,890 ಕೊವಿಡ್-19 ಸೋಂಕಿತರು ಮಹಾಮಾರಿಯಿಂದ ಸಾವನ್ನಪ್ಪಿದ್ದು, 3,53,299 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

LEAVE A REPLY

Please enter your comment!
Please enter your name here