ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್, ಸುದ್ದಿ ಪ್ರಸಾರದ ವೆಬ್ಸೈಟ್‌ಗಳು..!

0
133
Tap to know MORE!

ಇದುವರೆಗೆ ಒಟಿಟಿ (OTT – Over The Top)ಗಳಲ್ಲಿ ಪ್ರಸಾರವಾಗುವ ಸಿನಿಮಾಗಳು, ವೆಬ್ ಸರಣಿ, ಡಾಕ್ಯುಮೆಂಟರಿ ಇತರೆ ಕಂಟೆಂಟ್‌ಗಳಿಗೆ ನಿಯಂತ್ರಣವೇ ಇರಲಿಲ್ಲ. ಆದರೆ ಈಗ ಒಟಿಟಿಯು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಗೆ ತರಲಾಗಿದ್ದು, ಇನ್ನು ಮುಂದೆ ಒಟಿಟಿ ಕಂಟೆಂಟ್‌ಗೆ ಲಗಾಮು ಬೀಳುವ ಸಾಧ್ಯತೆ ಇದೆ.

ಒಟಿಟಿ ಮಾತ್ರವೇ ಅಲ್ಲದೆ, ಸುದ್ದಿ ವೆಬ್ಸೈಟ್‌ಗಳು, ಆನ್ಲೈನ್ ಸುದ್ದಿ ಮಾಧ್ಯಮಗಳು, ಆನ್‌ಲೈನ್ ವಾರ್ತೆಗಳು, ಆನ್‌ಲೈನ್ ಸಿನಿಮಾ ಇನ್ನೂ ಕೆಲವು ಆನ್‌ಲೈನ್ ಕಂಟೆಂಟ್ ಪ್ರೊವೈಡರ್‌ಗಳನ್ನು ಮಾಹಿತಿ ಹಾಗೂ ಪ್ರಸಾರ ಇಲಾಖೆ ವ್ಯಾಪ್ತಿಯ ಒಳಕ್ಕೆ ತರಲಾಗಿದೆ.

ಇದನ್ನೂ ಓದಿ: ಹಲವು ‘ಪ್ರಥಮ’ಗಳಿಗೆ ಸಾಕ್ಷಿಯಾದ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ ಹಾಟ್‌ಸ್ಟಾರ್ ಇನ್ನೂ ಹಲವು ಒಟಿಟಿ ಫ್ಲಾಟ್‌ಫಾರ್ಮ್‌ಗಳ ಮೇಲೆ ಇನ್ನು ಮುಂದೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಣ್ಗಾವಲಿರುತ್ತದೆ. ಪ್ರಸ್ತುತ ಇಲಾಖೆಯನ್ನು ಸಚಿವ ಪ್ರಕಾಶ್ ಜಾವಡೇಕರ್ ಮುನ್ನಡೆಸುತ್ತಿದ್ದಾರೆ.

ಇಲಾಖೆಯು ಒಟಿಟಿಗಳ ಕಂಟೆಂಟ್‌ ಮೇಲೆ ಕಣ್ಣಿಡಲಿದೆ

ಒಟಿಟಿ ಗಳಲ್ಲಿ ಪ್ರಸಾರವಾಗುವ ಕಂಟೆಂಟ್ ಬಗ್ಗೆ ಈ ಹಿಂದೆ ಕೆಲವು ದೂರುಗಳು ಬಂದಿದ್ದವು. ಹಾಗಾಗಿ ಒಟಿಟಿಗಳನ್ನು ಹಾಗೂ ಇತರ ಸ್ವತಂತ್ರ್ಯ ಕಂಟೆಂಟ್‌ ಪ್ರೊವೈಡರ್‌ಗಳನ್ನು ಇಲಾಖೆಯ ಅಡಿಗೆ ತರಲಾಗಿದೆ. ಇನ್ನು ಮುಂದೆ ಇಲಾಖೆಯು ಈ ಎಲ್ಲಾ ಕಂಟೆಂಟ್‌ ಪ್ರೊವೈಡರ್‌ಗಳ ‘ಮೇಲುಸ್ತುವಾರಿ’ ನೋಡಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಒಟಿಟಿ ಹಾಗೂ ಇತರೆ ಆನ್‌ಲೈನ್‌ ಕಂಟೆಂಟ್‌ಗಳನ್ನು ಇಲಾಖೆಯ ಅಡಿಗೆ ತರಲು ಸಂವಿಧಾನದ 77 ನೇ ವಿಧಿಗೆ ತಿದ್ದುಪಡಿ ತರಲಾಗಿದ್ದು, ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರ ಅಂಕಿತವನ್ನೂ ಪಡೆಯಲಾಗಿದೆ. ಈ ತಿದ್ದುಪಡಿಯು ಶೀಘ್ರವಾಗಿ ಜಾರಿಗೆ ಬರಲಿದೆ.

ಇಲಾಖೆಗೆ ಇದೆ ಕಂಟೆಂಟ್‌ ರದ್ದು ಮಾಡುವ ಹಕ್ಕು!
ಈಗಿನಿಂದ ಒಟಿಟಿಗಳು ಪ್ರಸಾರ ಮಾಡುವ ಸಿನಿಮಾ, ವೆಬ್ ಸರಣಿ, ಪಾಡ್‌ಕಾಸ್ಟ್‌, ಡಾಕ್ಯುಮೆಂಟರಿ ಇನ್ನಿತರೆ ಆನ್‌ಲೈನ್ ಕಂಟೆಂಟ್‌ಗಳನ್ನು ರದ್ದು ಮಾಡುವ, ಬದಲಾಯಿಸುವ, ತಡೆಹಿಡಿಯುವ ಅಧಿಕಾರ ಮಾಹಿತಿ ಹಾಗೂ ಪ್ರಸಾರ ಇಲಾಖೆಗೆ ಇರಲಿದೆ.

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಹಾಟ್‌ಸ್ಟಾರ್ ಇನ್ನೂ ಹಲವಾರು ಒಟಿಟಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಆದರೆ ಒಟಿಟಿಗಳನ್ನು ಪ್ರಸಾರವಾಗುವ ಸಿನಿಮಾ, ವೆಬ್ ಸರಣಿಗಳಿಗೆ ಸೆನ್ಸಾರ್‌ಶಿಪ್ ಇರಲಿಲ್ಲ. ಆದರೆ ಈಗ ಈ ಫ್ಲಾಟ್‌ಫಾರ್ಮ್‌ನ ಕಂಟೆಂಟ್ ಮೇಲೆ ಇಲಾಖೆಗೆ ಹಿಡಿತ ದೊರೆತಿದೆ.

LEAVE A REPLY

Please enter your comment!
Please enter your name here