ನೈಜ ಸ್ವಭಾವ ಕಂಡುಕೊಂಡಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ : ಸ್ವಾಮಿ ಬೋಧಮಯಾನಂದಜಿ

0
200
Tap to know MORE!

ಮಂಗಳೂರು: “ನಮ್ಮ ನೈಜ ಸ್ವಭಾವ ಅರಿತು ಇತರರಿಗೂ ಅವರ ನೈಜ ಸ್ವಭಾವ ಅರಿತುಕೊಳ್ಳಲು ನಾವು ಸಹಾಯ ಮಾಡಬೇಕು. ಆಗ ಮಾತ್ರ ಅಂತಃಶಕ್ತಿ ಜಾಗೃತವಾಗಿ ಶ್ರೇಯಸ್ಸು, ಪಾವಿತ್ರ್ಯತೆ ಸೇರಿದಂತೆ ಎಲ್ಲಾ ಸದ್ಗುಣಗಳು ಬರುವುದು. ಹಾಗಾದಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ” ಎಂದು ಹೈದರಾಬಾದ್ ನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಎಕ್ಸೆಲೆನ್ಸ್ ನ ನಿರ್ದೇಶಕ ಸ್ವಾಮಿ ಬೋಧಮಯಾನಂದಜಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವರ್ಚುವಲ್‌ ವೇದಿಕೆಯಲ್ಲಿ ನಡೆದ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಾಲ್ಕನೇ ಉಪನ್ಯಾಸದಲ್ಲಿ ಅವರು “ಸ್ವಾಮಿ ವಿವೇಕಾನಂದ ಮತ್ತು ಶ್ರೇಷ್ಠ ವ್ಯಕ್ತಿತ್ವ” ಎಂಬ ಕುರಿತು ಮಾತನಾಡಿದರು.

ಮಂಗಳೂರು ವಿವಿ: ತುಳು ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವರ್ಣ ಸಂಭ್ರಮ

ವ್ಯಕ್ತಿತ್ವ ನಿರ್ಮಾಣ ವಿವೇಕ ವಾಣಿ
‘ವ್ಯಕ್ತಿತ್ವ ನಿರ್ಮಾಣ’ ವಿವೇಕ ವಾಣಿ ಸರಣಿ ಉಪನ್ಯಾಸ (ವೆಬಿನಾರ್)

ಈ ಕಾರ್ಯಕ್ರಮದಲ್ಲಿ  ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ,  ಸ್ವಾಮಿ ಏಕಗಮ್ಯಾನಂದಜಿ, ಚಂಡಿಗರ್ ರಾಮಕೃಷ್ಣ ಮಠದ ಸ್ವಾಮಿ ದ್ವಾರಕೇಶಾನಂದಜಿ, ತೆಲಂಗಾಣ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಕೋದಂಡರಾಮ್, ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ., ಬೆಂಗಳೂರಿನ ಮನಸ್ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ. ರಘೋತ್ತಮ ರಾವ್, ಮಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಪೌಲ್ ಜಿ. ಆಕ್ವಿನಸ್ ಸೇರಿದಂತೆ ಹಲವಾರು ಗಣ್ಯರು, ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ಕೇಂದ್ರದ ಸದಸ್ಯ ಡಾ. ಚಂದ್ರು ಹೆಗ್ಡೆ ವಂದಿಸಿದರು, ಮಂಗಳೂರು ರಾಮಕೃಷ್ಣ ಮಠದ ಸ್ವಯಂಸೇವಕ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here