ಶತಮಾನಗಳ ಕನಸಿನ ಮಂದಿರಕ್ಕೆ ಎರಡು ವಿನ್ಯಾಸಗಳು ಪರಿಗಣನೆಯಲ್ಲಿ

0
139
Tap to know MORE!

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ಭಾರತೀಯರ ಕನಸಿನ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಲಾಯಿತು. ಇಲ್ಲಿನ ಕುಬೇರತಿಲದಲ್ಲಿ ರುದ್ರಾಭಿಷೇಕ ನೆರವೇರಿಸುವ ಮೂಲಕ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

ಇದರೊಂದಿಗೆ ಮಂದಿರದ ವಿನ್ಯಾಸ ಹೇಗಿರಬೇಕೆಂಬ ವಿಚಾರದ ಚರ್ಚೆಗಳು ನಡೆಯುತ್ತಿವೆ. 1992ರಲ್ಲಿ ವಿಶ್ವ ಹಿಂದೂ ಪರಿಷತ್ ತನ್ನದೇ ಆದ ಮಂದಿರ ವಿನ್ಯಾಸವನ್ನು ಮುಂದಿಟ್ಟಿತ್ತು. ಆ ವಿನ್ಯಾಸ ರಚಿಸಿದ್ದು ಹೆಸರಾಂತ ವಾಸ್ತು ಶಿಲ್ಪಿ ಚಂದ್ರಕಾಂತ ಸೋಮಪುರ್. ಆ ವಿನ್ಯಾಸಕ್ಕೆ ಅವರದ್ದೇ ಹೆಸರನ್ನೂ ಇರಿಸಲಾಗಿದೆ. ರಾಮಮಂದಿರ ನಿರ್ಮಾಣದ ಆಂದೋಲನ ಶುರುವಾಗಿ ಪ್ರಖರಗೊಂಡಾಗ ಅದೇ ವಿನ್ಯಾಸದ ರಾಮಮಂದಿರದ ಚಿತ್ರಗಳು ಕರಪತ್ರಗಳಲ್ಲಿ, ಕ್ಯಾಲೆಂಡರ್ ಗಳಲ್ಲೆಲ್ಲ ಮುದ್ರಿತವಾಗಿತ್ತು. ಜನರೂ ಅದನ್ನು ಮೆಚ್ಚಿಕೊಂಡಿದ್ದರು.

ಮತ್ತೊಂದು ಮೂಲದ ಪ್ರಕಾರ, ರಾಮಮಂದಿರಕ್ಕೆ ನಗರ ಎಂಬ ವಿನ್ಯಾಸವನ್ನೂ ಪರಿಗಣಿಸಲಾಗುತ್ತಿದೆ. ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ನಗರ ಮಾದರಿಯ ಕಟ್ಟಡಗಳು ಹೆಚ್ಚು ಪ್ರಚಲಿತ. ಈ ಮಾದರಿಯಲ್ಲಿ ಉಕ್ಕು ಮತ್ತು ಸಿಮೆಂಟ್ ಬಳಕೆಯಿರುವುದಿಲ್ಲ. ಅಮೃತಶಿಲೆಗಳನ್ನು ಸ್ಲಾಬ್ಗಳಾಗಿ ಪರಿವರ್ತಿಸಿ ಅವುಗಳನ್ನು ಜೋಡಿಸಿ ಮಂದಿರ ನಿರ್ಮಿಸಲಾಗುತ್ತದೆ. ಈ ಶೈಲಿಯೂ ಸದ್ಯ ಪರಿಗಣನೆಯಲ್ಲಿದೆ.

ಈ ಎರಡೂ ಬಗೆಯ ವಿನ್ಯಾಸಗಳಲ್ಲಿ ಒಂದರ ಆಯ್ಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿವೇಚನೆಗೆ ಬಿಡಲಾಗಿದೆ. ಸದ್ಯದಲ್ಲಿಯೇ ಎರಡೂ ವಿನ್ಯಾಸಗಳನ್ನು ಅವರಿಗೆ ತೋರಿಸಿ ಆಯ್ಕೆ ಮಾಡಲು ಸಲಹೆ ಕೇಳಲಾಗುತ್ತದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here