ಶವಗಳ ಅಂತ್ಯಸಂಸ್ಕಾರಕ್ಕೆ ನಗರದ ಹೊರವಲಯದಲ್ಲಿ ಜಾಗ ನಿಗದಿ: ಶ್ರೀರಾಮುಲು

0
144
Tap to know MORE!

ಬೆಂಗಳೂರು ನಗರದ COVID-19 ಸೋಂಕಿತರ ಶವಗಳನ್ನು ನಗರದ ಸ್ಮಶಾನಗಳ ಬದಲಿಗೆ, ಸಾರ್ವಜನಿಕರ ಸುರಕ್ಷತೆಯ ಕಾಳಜಿಯ ಹಿನ್ನೆಲೆಯಲ್ಲಿ, ನಗರದ ಹೊರವಲಯದಲ್ಲಿ ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗುವುದು ಎಂದು ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಬುಧವಾರ ತಿಳಿಸಿದ್ದಾರೆ.

ಇದಕ್ಕಾಗಿ ಬೆಂಗಳೂರು ಹೊರವಲಯದಲ್ಲಿ ಈಗಾಗಲೇ, 35 ಎಕರೆ ಭೂಮಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು ಮತ್ತು ಅಂತಿಮ ವಿಧಿವಿಧಾನಗಳನ್ನು ನಡೆಸುವಾಗ, ಸತ್ತವರ ರಕ್ತಸಂಬಂಧಿಗಳು ಬಳಸಿದ ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ ಕಿಟ್‌ಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದರು.

ಬೆಂಗಳೂರು ಹೊರವಲಯದ ಮಾರೇನಹಳ್ಳಿ, ಹೆಸರುಘಟ್ಟ ಬಳಿಯ ಹುತ್ತನಹಳ್ಳಿಯಲ್ಲಿನ ಜಾಗ ಸೇರಿದಂತೆ ಸುಮಾರು 35 ಎಕರೆ, 18 ಗುಂಟೆ ಜಾಗವನ್ನು ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here