ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಪ್ರಕರಣದ ಡ್ರಗ್ ಆಯಾಮ ಕೇಸ್ ನಲ್ಲಿ ಇದೀಗ ಎನ್ ಸಿಬಿ ನಟರಾದ ಶಾರೂಖ್ ಖಾನ್, ರಣಬೀರ್ ಕಪೂರ್, ಅರ್ಜುನ್ ರಾಂಪಾಲ್ ಹಾಗೂ ಡಿನೋ ಮೊರಿಯಾ ಅವರ ವಿಚಾರಣೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಡ್ರಗ್ಸ್ ವಿಚಾರ ಸಂಬಂಧ ಎನ್ ಸಿಬಿ ನಾಲ್ವರು ದಿಗ್ಗಜ ನಟರಿಗೆ ಶೀಘ್ರವೇ ಸಮನ್ಸ್ ಹೊರಡಿಸಲು ಮುಂದಾಗಿದೆ ಎನ್ನಲಾಗಿದೆ. ಶಾರುಖ್ ಖಾನ್, ರಣಬೀರ್ ಕಪೂರ್, ಅರ್ಜುನ್ ರಾಂಪಾಲ್ ಹಾಗೂ ಡಿನೋ ಮೋರಾ, ಈ ನಾಲ್ಕು ಹೆಸರುಗಳನ್ನು ಡ್ರಗ್ಸ್ ಕೇಸ್ ನಲ್ಲಿ ಕೇಳಿ ಬರುತ್ತಿದ್ದು, ಎನ್ಸಿಬಿ ಈ ನಾಲ್ವರು ನಟರಿಗೆ ಸಮನ್ಸ್ ಕಳುಹಿಸುವ ಸಾಧ್ಯತೆ ಇದೆ