ಶಾರ್ಜಾದಿಂದ ಮಂಗಳೂರಿಗೆ ಬಂದಿಳಿದ ವಿಶೇಷ ವಿಮಾನ!

0
164
ವಿಮಾನ ನಿಲ್ದಾಣದ ಸಾಂಧರ್ಭಿಕ ಚಿತ್ರ
Tap to know MORE!

ಮಂಗಳೂರು: ಇತರ ದೇಶಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ವಂದೇ ಭಾರತ್ ಮಿಷನ್’ ನ ನಾಲ್ಕನೇ ಹಂತದ ಅಡಿಯಲ್ಲಿ ಆಯೋಜಿಸಲಾದ ವಿಶೇಷ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಜುಲೈ 8 ರ ಬುಧವಾರ ಶಾರ್ಜಾದಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತು.

ವಿಮಾನವು ನಿನ್ನೆ ಸಂಜೆ ಸುಮಾರು 6.55 ಕ್ಕೆ 179 ಪ್ರಯಾಣಿಕರನ್ನು ಕರೆತಂದಿತು ಪ್ರಯಾಣಿಕರಲ್ಲಿ ಹಲವರು ಗರ್ಭಿಣಿಯರು, ಖಾಯಿಲೆಗಳಿಂದ ಬಳಲುತ್ತಿರುವ ಜನರು ಮತ್ತು ಉದ್ಯೋಗ ಕಳೆದುಕೊಂಡವರಾಗಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಸೂಚಿಸಲಾಗಿದೆ.

ಜುಲೈ 12 ರಂದು ಬಹ್ರೇನ್ ಮತ್ತು ಮಸ್ಕತ್‌ನಿಂದ ಇನ್ನೂ ಎರಡು ವಿಮಾನಗಳು ಇಲ್ಲಿಗೆ ಬರಲಿವೆ.

LEAVE A REPLY

Please enter your comment!
Please enter your name here