ಶಾಲೆಗಳನ್ನು ತೆರೆಯುವ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲು ರಾಜ್ಯಗಳಿಗೆ ಸೂಚನೆ

0
216
School, ಶಾಲೆ, ತರಗತಿ
ಸಾಂದರ್ಭಿಕ ಚಿತ್ರ
Tap to know MORE!

ದೇಶಾದ್ಯಂತ ಕೋವಿಡ್ -19 ಸೋಂಕಿತರ ಸಂಖ್ಯೆ ಭಾರೀ ವೇಗವಾಗಿ ಏರುತ್ತಿದ್ದರೂ, ಅದರ ವಿರುದ್ಧದ ಹೋರಾಟದ ಭಾಗವಾಗಿ, ವಿವಿಧ ರಾಜ್ಯಗಳು ಲಾಕ್‌ಡೌನ್‌ಗಳನ್ನು ವಿಧಿಸುತ್ತಿದ್ದರೂ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಭಾಗವಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯವನ್ನು ನೀಡುವಂತೆ ಪತ್ರವನ್ನು ಕಳುಹಿಸಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ – ಮುಂದಿನ ಯಾವ ತಿಂಗಳಲ್ಲಿ ಶಾಲೆಗಳನ್ನು ಪುನಃ ತೆರೆಯುಬಹುದು ಎಂದು ಶಾಲೆಗೆ ಹೋಗುವ ಮಕ್ಕಳ ಪೋಷಕರಿಂದ ಅಭಿಪ್ರಾಯ ಪಡೆಯುವಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಪತ್ರದಲ್ಲಿ ಉಲ್ಲೇಖಿಸಿದೆ.

ಸಚಿವಾಲಯವು ಪ್ರತಿಕ್ರಿಯೆ ಪತ್ರದಲ್ಲಿ ಕೋರಿರುವ ಎರಡು ನಿರ್ದಿಷ್ಟ ಪ್ರಶ್ನೆಗಳೆಂದರೆ

  • ಶಾಲೆಗಳನ್ನು ಪುನಃ ತೆರೆಯಲು ಸೂಕ್ತ ಅವಧಿ ಯಾವುದು – ಆಗಸ್ಟ್ / ಸೆಪ್ಟೆಂಬರ್ / ಅಕ್ಟೋಬರ್ 2020
  • ಶಾಲೆಗಳು ಮತ್ತು ಅವು ಮತ್ತೆ ತೆರೆದಾಗ ಶಾಲೆ , ಸಮಯ ಸಾರಿಣಿ ಮತ್ತು ಪಠ್ಯದ ಬಗ್ಗೆ ಪೋಷಕರ ನಿರೀಕ್ಷೆಗಳು ಯಾವುವು.

ಈ ಪತ್ರವನ್ನು ಎರಡು ದಿನಗಳ ಹಿಂದೆಯೇ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಮೂರು ದಿನಗಳೊಳಗಾಗಿ ಪೋಷಕರ ಪ್ರತಿಕ್ರಿಯೆ ಸಂಗ್ರಹವಾಗಬೇಕು ಎಂದು ಕೇಳಿದ್ದಾರೆ ಎಂದು ಹೇಳಲಾಗಿದೆ.

ಗೃಹ ಸಚಿವಾಲಯ ಜೂನ್ 29 ರಂದು ಘೋಷಿಸಿದ ಅನ್ಲಾಕ್ -2 ಮಾರ್ಗಸೂಚಿಗಳಲ್ಲಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು 2020 ಜುಲೈ 31 ರವರೆಗೆ ತೆರೆಯದಂತೆ ಆದೇಶಿಸಿತ್ತು.

LEAVE A REPLY

Please enter your comment!
Please enter your name here