‘ಶಿಕ್ಷಕ ಮಿತ್ರ’ ಆ್ಯಪ್ ಅನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

0
203
Tap to know MORE!

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಶುಕ್ರವಾರ ಇಲ್ಲಿ ‘ಶಿಕ್ಷಕ ಮಿತ್ರ‘ ಆ್ಯಪ್ ಒಂದನ್ನು ಉದ್ಘಾಟಿಸಿದರು. ಈ ಅನನ್ಯ ಅಪ್ಲಿಕೇಶನ್ ಅನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ‘ಶಿಕ್ಷಕ ಮಿತ್ರ’ ಮೊಬೈಲ್ ಅಪ್ಲಿಕೇಶನ್ ಮತ್ತು ‘ವಿದ್ಯಾವಿನೀತ’ ಹಾಗೂ ‘ಶಿಕ್ಷಣ ಯಾತ್ರೆ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಇದನ್ನೂ ನೋಡಿ : ರಾಜ್ಯದಲ್ಲಿ ಅಕ್ಕಿ ಎಟಿಎಂ ತೆರೆಯಲು ಸರ್ಕಾರ ಚಿಂತನೆ

ಈ ಹೊಸ ಅಪ್ಲಿಕೇಶನ್ ಶಿಕ್ಷಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಶಿಕ್ಷಕರು ತಮ್ಮ ಸೇವೆಗೆ ಸಂಬಂಧಿಸಿದ ಸಮಸ್ಯೆಗಳು, ವರ್ಗಾವಣೆ, ಸಂಬಳ ಮತ್ತು ಇತರ ಪ್ರಯೋಜನಗಳನ್ನು ಆ್ಯಪ್ ಮೂಲಕ ಪಡೆಯಬಹುದು. ಶಿಕ್ಷಕರು ತಮ್ಮ ಸೇವೆಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ ಬ್ಲಾಕ್ ಶಿಕ್ಷಣ ಕಚೇರಿಗೆ ಹೋಗುವ ಅಗತ್ಯವಿಲ್ಲ.

ಈ ಹಿಂದೆ, ಶಿಕ್ಷಕರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ, ಶಾಲೆಗೆ ರಜೆ ಹಾಕುವ ಮೂಲಕ ಬಿಇಒ ಕಚೇರಿಗೆ ಹೋಗುತ್ತಿದ್ದರು. ಅವರ ಗೈರು ಹಾಜರಿಯು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿತ್ತು.

ಇದೀಗ ಆನ್‌ಲೈನ್ ಮೂಲಕವೇ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಸರ್ಕಾರಿ ಶಿಕ್ಷಕರಿಗೆ ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಸೆಪ್ಟೆಂಬರ್ 2020 ರಿಂದ ಹೊಸ ವರ್ಗಾವಣೆ ನೀತಿ ಜಾರಿಗೆ ಬರಲಿದೆ. ‘ಶಿಕ್ಷಕ ಆ್ಯಪ್’ ಶಿಕ್ಷಕರ ಸಮಸ್ಯೆಗಳಿಗೆ ನೆರವಾಗಲಿದೆ ಮತ್ತು ಅವರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಪುಸ್ತಕ ಬಿಡುಗಡೆ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ’ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. “ಅತ್ಯಂತ ಸಂತೋಷದಿಂದ ಇಂದು ಶಿಕ್ಷಕ ಮಿತ್ರ ಆಪ್ ಲೋಕಾರ್ಪಣೆ ಮತ್ತು ಶಿಕ್ಷಣ ಸಚಿವರು ಹಾಗೂ ಮಿತ್ರರಾದ ಸುರೇಶ್ ಕುಮಾರ್ ಅವರ ವಿದ್ಯಾವಿನೀತ ಮತ್ತು ಅವರ ಅಂಕಣಬರಹದ ಸಂಗ್ರಹ ಶಿಕ್ಷಣಯಾತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ” ಎಂದು ಯಡಿಯೂರಪ್ಪ ಹೇಳಿದರು.

LEAVE A REPLY

Please enter your comment!
Please enter your name here