ದ.ಕ ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯುತ ವಿಷ್ಣುಮೂರ್ತಿ

0
186
Tap to know MORE!

ವಿಷ್ಣುಮೂರ್ತಿ ಕಾರ್ನಾಡ್ ಇವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಮುಲ್ಕಿ ಸುರತ್ಕಲ್ ರಾಮಕ್ಷತ್ರಿಯ ಸಂಘದ ಸ್ಥಾಪಕ ಮುಂದಾಳುಗಳಲ್ಲಿ ಒಬ್ಬರಾಗಿದ್ದು, ತನ್ನ ಕರ್ತವ್ಯ ಶೀಲತೆ, ಪ್ರಾಮಾಣಿಕತೆಯಿಂದ ದಕ್ಷ ಉಪನ್ಯಾಸಕ, ಪ್ರಾಂಶುಪಾಲರಾಗಿ ಜನಾನುರಾಗಿಯಾದವರು.

ಸರಕಾರಿ ಪದವಿ ಪೂರ್ವ ಕಾಲೇಜು ರಥಬೀದಿ, ಹಳೆಯಂಗಡಿ, ಕೃಷ್ಣಾಪುರ ಮೊದಲಾದೆಡೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸುದೀರ್ಘ ಸೇವೆಯ ಬಳಿಕ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿರುತ್ತಾರೆ.

ನಮ್ಮ ಸಮಾಜದ ವ್ಯಕ್ತಿಯೋರ್ವರು ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಹುದ್ದೆ ಅಲಂಕರಿಸುತ್ತಿರುವುದು ಪ್ರಥಮ ಹಾಗೂ ನಮಗಿದು ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಸಮಾಜಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಸಾಮಾಜಿಕ ಕಳಕಳಿ ಹೊಂದಿರುವ ಇವರ ಅಧಿಕಾರಾವಧಿ ಯಶಸ್ಸನ್ನು ಕಾಣಲಿ. ಸಾಮಾಜಿಕ ಕಳಕಳಿ ಹೊಂದಿರುವ ಇವರ ಅಧಿಕಾರಾವಧಿ ಯಶಸ್ಸನ್ನು ಕಾಣಲಿ ಇನ್ನಷ್ಟು ಕೀರ್ತಿ, ಪ್ರಶಸ್ತಿ ಗಳು ಲಭಿಸಲಿ” ಎಂದು ಮುಲ್ಕಿ-ಸುರತ್ಕಲ್ ರಾಮ ಕ್ಷತ್ರಿಯ ಸೇವಾ ಸಂಘದ ಕಾರ್ಯದರ್ಶಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here