ಶಿಯೋಮಿಯು ಭಾರತೀಯರಿಗೆ ಅತೀ ಹತ್ತಿರವಾಗಿದೆ : ಭಾರತೀಯ ಮುಖ್ಯಸ್ಥ

0
201
Tap to know MORE!

ನವದೆಹಲಿ: ದೇಶದಲ್ಲಿ ಚೀನಾದ ಸರಕುಗಳಿಗೆ ಬಹಿಷ್ಕಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಿಯೋಮಿ ಕಂಪೆನಿಯ ಭಾರತದ ಮುಖ್ಯಸ್ಥ ಮನು ಕುಮಾರ್ ಜೈನ್, “ಭಾರತದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟಗಾರ ಶಿಯೋಮಿ, ಇತರ ಯಾವುದೇ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗಿಂತ ಹೆಚ್ಚು ಭಾರತೀಯ ಎಂದೆನಿಸುತ್ತದೆ” ಎಂದು ಹೇಳಿದರು.

ಕಂಪನಿಯ ಮೊಬೈಲ್ ಫೋನ್ ಆರ್‌ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಕೇಂದ್ರ ಮತ್ತು ಉತ್ಪನ್ನ ತಂಡವು ಭಾರತದಲ್ಲಿದೆ ಎಂದು ಹೇಳಿದ ಶಿಯೋಮಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು, ದೇಶದಲ್ಲಿ 50,000ಕ್ಕೂ ಅಧಿಕ ಜನರಿಗೆ ಶಿಯೋಮಿ ಉದ್ಯೋಗ ನೀಡುತ್ತಿದೆ ಎಂದು ತಿಳಿಸಿದರು.

ಶಿಯೋಮಿಯ ಹೆಚ್ಚಿನ ಫೋನ್‌ಗಳು ಮತ್ತು ಟಿವಿಗಳು “ಮೇಡ್ ಇನ್ ಇಂಡಿಯಾ” ಆಗಿವೆ ಮತ್ತು ನಾಯಕತ್ವದ ಇಡೀ ತಂಡದಲ್ಲಿ ಕೇವಲ ಭಾರತೀಯರೇ ಇದ್ದಾರೆ ಮತ್ತು ಕಂಪನಿಯು ತನ್ನ ತೆರಿಗೆಯನ್ನು ಭಾರತಕ್ಕೆ ಪಾವತಿಸುತ್ತದೆ, ಎಂದರು.

ಅವರು ಇದರ ಕುರಿತು ಮಾಡಿದ ಟ್ವೀಟ್ ಗೆ, ಟ್ವಿಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು ಅವರನ್ನು ಒಪ್ಪಿದರೆ, ಇನ್ನೂ ಕೆಲವರು ಮಾತೃ ಕಂಪನಿ ಚೈನಾ ಮೂಲದ್ದು ಎಂದು ಹೇಳಿದರು.

LEAVE A REPLY

Please enter your comment!
Please enter your name here