ಶಿರೂರು ಮಠಕ್ಕೆ 15ರ ಬಾಲಕನಿಗೆ ಪಟ್ಟ ; ಪೇಜಾವರ ಶ್ರೀಗಳಿಂದ ಆಕ್ಷೇಪ

0
132
Tap to know MORE!

ಉಡುಪಿ: ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ 15 ವರ್ಷದ ಬಾಲಕನನ್ನು ನೇಮಿಸುತ್ತಿರುವುದು ಮತ್ತು ಅದಕ್ಕಾಗಿ ಲಾಕ್ಡೌನ್ ನಿರ್ಬಂಧ ಮಧ್ಯೆಯೇ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಈ ಹಿಂದೆ ಉಡುಪಿ ಪೇಜಾವರ ಮಠದಲ್ಲಿ ಮಠಾಧೀಶರಾಗಿದ್ದ ವಿಶ್ವವಿಜಯ ಸ್ವಾಮೀಜಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರಿಹಾರ ಹಣ ಕೊಡಲು ನಾವೇನು ದುಡ್ಡು ಪ್ರಿಂಟ್ ಮಾಡ್ತೇವಾ?: ಸಚಿವ ಈಶ್ವರಪ್ಪ

ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಜನ ತತ್ತರಿಸಿ ಹೋಗಿದ್ದು ಸರಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ, ಶೀರೂರು ಮೂಲಮಠದಲ್ಲಿ ನೂತನ ಯತಿ ನೇಮಕದ ಧಾರ್ಮಿಕ ಕಾರ್ಯ ನಡೆಯುತ್ತಿದೆ.‌ ಇಂಥ ಸಂದರ್ಭದಲ್ಲಿ ನೂತನ ಯತಿಯ ನೇಮಕ ಆಗುತ್ತಿರುವುದು ತುಂಬಾ ಶೋಚನೀಯ. ಲಾಕ್ಡೌನ್ ಹೇರಿದ್ದರಿಂದ ಈ ಸಂದರ್ಭದಲ್ಲಿ ಅನೇಕ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪಟ್ಟಾಭಿಷೇಕ ಕಾರ್ಯದಲ್ಲಿ ಕೊರೋನಾ ರೂಲ್ಸ್ ಗಳನ್ನು ಫಾಲೋ ಮಾಡಲು ಸಾಧ್ಯವಾಗುವುದಿಲ್ಲ. ಹಾಗಿದ್ದರೂ, ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಎಷ್ಟು ಸರಿ ಎಂದು ವಿಶ್ವವಿಜಯರು ಪ್ರಶ್ನೆ ಮಾಡಿದ್ದಾರೆ. ‌

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here