ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಶಿವಸೇನೆ!

0
113
Tap to know MORE!

ಮುಂಬೈ: ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಶಿವಸೇನೆ ಪಕ್ಷವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಶಿವಸೇನೆಯ ಪತ್ರಿಕೆ “ಸಮನಾ” ದ ಸಂಪಾದಕೀಯದಲ್ಲಿ, ಈ ವಿಚಾರವು ಶಬ್ದ ಮಾಲಿನ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

“ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಲ್ಲಿಸಲು ಕೇಂದ್ರವು ಸುಗ್ರೀವಾಜ್ಞೆಯನ್ನು ಪ್ರಕಟಿಸಬೇಕು” ಎಂದು ಅದು ಹೇಳಿದೆ.

ಇದನ್ನೂ ಓದಿ: ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆರವಿಗೆ ಸೂಚನೆ ನೀಡಿಲ್ಲ – ಕರ್ನಾಟಕ ಪೊಲೀಸ್ ಸ್ಪಷ್ಟನೆ

ಶಿವಸೇನೆಯ ಮುಂಬೈ-ದಕ್ಷಿಣ ವಿಭಾಘ್ ಪ್ರಮುಖ್ (ವಿಭಾಗದ ಮುಖ್ಯಸ್ಥ) ಪಾಂಡುರಂಗ್ ಸಕ್ಪಾಲ್ ಅವರು ಮುಸ್ಲಿಂ ಮಕ್ಕಳಿಗಾಗಿ “ಅಜಾನ್” ವಾಚನ ಸ್ಪರ್ಧೆಯನ್ನು ನಡೆಸುವ ಸಲಹೆಯ ಬಳಿಕ ಈ ಅಭಿಪ್ರಾಯಗಳು ಬಂದಿವೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

“ನಾವು ಇದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಏಕೆಂದರೆ ದೇಶದಲ್ಲಿ 22 ಕೋಟಿ ಮುಸ್ಲಿಮ್ ನಾಗರಿಕರು ಇದ್ದಾರೆ. ಹೀಗಾಗಿ, ಶಬ್ದ ಮಾಲಿನ್ಯ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ” ಎಂದು ಪತ್ರಿಕೆಯು ಹೇಳಿದೆ.

LEAVE A REPLY

Please enter your comment!
Please enter your name here