ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ®️ತೋಕೂರು, ಹಳೆಯಂಗಡಿ,
ಇದರ ಆಶ್ರಯದಲ್ಲಿ 10 ನೇ ತೋಕೂರು ಬಸ್ಸು ನಿಲ್ದಾಣದಿಂದ -ವಿಶ್ವಬ್ಯಾಂಕ್ ಸಮಗ್ರ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ ಘಟಕದವರೆಗೆ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವರ ಷಷ್ಠಿ ಮಹೋತ್ಸವದ ಪೂರ್ವಭಾವಿಯಾಗಿ ವಿಶೇಷ ಶ್ರಮದಾನ ಮಾಡಲಾಯಿತು.
ಗ್ರಾಮದ ಅಭಿವೃದ್ಧಿಗೆ ಸ್ವಚ್ಛತೆಯೂ ಸಹ ಪೂರಕವಾಗಿದೆ, ಶುದ್ಧ ಪರಿಸರ ಮತ್ತು ಆರೋಗ್ಯಯುತ ಸಮಾಜ ಕಟ್ಟಲು ಎಲ್ಲರ ಸಹಕಾರ ಇದ್ದಲ್ಲಿ ಮಾತ್ರ ಸಾಧ್ಯವಿದೆ ಎಂದು ಕ್ಲಬ್ ನ ಹಿರಿಯ ಸದಸ್ಯರು ಶ್ರೀ ಚಂದ್ರಶೇಖರ್ ದೇವಾಡಿಗ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ತೋಕೂರು ಇದರ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರು ಶ್ರೀ ಮೋಹನ್ ದಾಸ್, ಕ್ಲಬ್ ನ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ. ಕೆ, ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಉಪಾಧ್ಯಕ್ಷರು ಶ್ರೀ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷರು ಶ್ರೀ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಶ್ರೀ ಜಗಧೀಶ್ ಕುಲಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ಕೋಶಾಧಿಕಾರಿ ಶ್ರೀ ಸಂಪತ್ ದೇವಾಡಿಗ,ಪರಿಸರ ಸಂರಕ್ಷಣಾ ಕಾರ್ಯದರ್ಶಿ ಶ್ರೀ ಸುನಿಲ್ ದೇವಾಡಿಗ, ತಂಡದ ನಾಯಕ ಶ್ರೀ ಗೌತಮ್ ಬೆಲ್ಚಡ್, ನಿವೃತ್ತ ಯೋಧರು ಹಾಗೂ ಕ್ಲಬ್ ನ ಸದಸ್ಯರು ಶ್ರೀ ವಿಜಯಕುಮಾರ್,
ಸದಸ್ಯರಾದ ಶ್ರೀ ಧರ್ಮಾನಂದ ಶೆಟ್ಟಿಗಾರ್, ದೀಪಕ್ ದೇವಾಡಿಗ, ಶ್ರೀ ಚಂದ್ರಶೇಖರ ದೇವಾಡಿಗ, ಶ್ರೀ ಸುರೇಶ್ ಆಚಾರ್ಯ, ಶ್ರೀ ಬಾಲಕೃಷ್ಣ ಲೈಟ್ ಹೌಸ್, ಶ್ರೀ ಸಂದೀಪ್ ಕುಮಾರ್, ಶ್ರೀ ಹರ್ಷಿತ್ ಕುಮಾರ್, ಶ್ರಮದಾನದಲ್ಲಿ ಭಾಗವಹಿಸಿದರು.