ನಮ್ಮ ಮನೆಯಲ್ಲಿಯೇ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ : ಶೆಹ್ಲಾ ರಶೀದ್ ತಂದೆಯಿಂದ ಆರೋಪ

0
98

ಶ್ರೀನಗರ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್‌ ವಿರುದ್ಧ ಅವರ ತಂದೆಯೇ ಆರೋಪ ಮಾಡಿದ್ದಾರೆ. ಮಗಳೇ ನನಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿರುವ ಶೆಹ್ಲಾ ತಂದೆ ಅಬ್ದುಲ್‌ ರಶೀದ್‌, ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ನಮ್ಮ ಮನೆಯಲ್ಲಿಯೇ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಈ ಚಟುವಟಿಕೆಯನ್ನು ನಾನು ವಿರೋಧಿಸಿದ್ದಕ್ಕೆ ನನ್ನ ಮಗಳು ಹಾಗೂ ಅವಳ ಭದ್ರತಾ ಸಿಬ್ಬಂದಿ ಜೊತೆಗೆ ಕುಟುಂಬಸ್ಥರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ಜೀವ ಬೆದರಿಕೆ ಇದೆ. ಹೀಗಾಗಿ ರಕ್ಷಣೆ ನೀಡುವಂತೆ ಪತ್ರದಲ್ಲಿ ರಶೀದ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದೇಶವಿರೋಧಿ, ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ”

ಇನ್ನು ಪತ್ರದಲ್ಲಿ ತನ್ನ ಮಗಳು ಶೆಹ್ಲಾ ರಶೀದ್‌, ಈಗಾಗಲೇ ಯುಎಪಿಎ ಅಡಿ ಬಂಧನವಾಗಿರುವ ಉದ್ಯಮಿ ಜಹೂರ್‌ ವಟಾಲಿ ಹಾಗೂ ಮಾಜಿ ಶಾಸಕ ರಶೀದ್‌ನಿಂದ ಜಮ್ಮು-ಕಾಶ್ಮೀರದ ರಾಜಕೀಯಕ್ಕೆ ಎಂಟ್ರಿ ಕೊಡಲು ಮೂರು ಕೋಟಿ ಪಡೆದಿದ್ದಾಳೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಶೆಹ್ಲಾ, ಆಕೆಯ ತಾಯಿ, ಕುಟುಂಬಸ್ಥರು ಎಲ್ಲರೂ ಅಕ್ರಮ ಹಣ ಹೂಡಿಕೆಗಳಲ್ಲಿ ಈಗಾಗಲೇ ಬಂಧನವಾಗಿರುವ ವಟಾಲಿ ಹಾಗೂ ರಶೀದ್‌ ಜೊತೆ ನಡೆಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅವರ ಇ-ಮೇಲ್‌, ಬ್ಯಾಂಕ್‌ ಡಿಟೇಲ್ಸ್‌ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇನ್ನು ನನ್ನ ವಿರುದ್ಧ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಕೇಸ್‌ ಹಾಕಿದ್ದಾಳೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪಿತೂರಿ ನಡೆಸಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ. ಸದ್ಯ ನಾನು ಕೂಡ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ಸತ್ಯಾಂಶ ಹೊರಬರಲಿದೆ ಎಂದು ತಂದೆ ಅಬ್ದುಲ್‌ ರಷೀದ್‌ ಹೇಳಿದ್ದಾರೆ. ಇನ್ನು ತಂದೆ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಶೆಹ್ಲಾ ರಶೀದ್‌, ತಾಯಿಗೆ ಹಿಂಸೆ ನೀಡುತ್ತ, ನಿಂದನೆ ಮಾಡುವ ನನ್ನ ಜೈವಿಕ ತಂದೆ ಸುಳ್ಳು ಹೇಳುತ್ತಿದ್ದಾನೆ. ತಾಯಿ ಜೊತೆ ನಾನು, ಸಹೋದರಿ ದೂರು ನೀಡಿದ್ದೇವೆ. ಇದು ಕೌಟುಂಬಿಕ ವಿಚಾರವಾಗಿದ್ದು, ಸುಳ್ಳು ಹೇಳುತ್ತಿರುವ ತಂದೆಯನ್ನು ನಂಬಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here